ಅಸಂಘಟಿತ ಕಾರ್ಮಿಕರಿಗೆ ಸಂಘಟನೆಯೇ ಅಸ್ತ್ರ: ರಘುಪತಿ ಭಟ್

ಉಡುಪಿ, ಫೆ.26: ಅಸಂಘಟಿತ ಕಾರ್ಮಿಕ ವರ್ಗಗಳಿಗೆ ಸಂಘಟನೆಯೇ ಪ್ರಮುಖ ಅಸ್ತ್ರ, ಯಾವುದೇ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ತಮ್ಮ ನಿಲುವುಗಳನ್ನು ಸಂಘಟನಾತ್ಮಕವಾಗಿಯೇ ಪ್ರಸ್ತುತ ಪಡಿಸಬೇಕಾಗುತ್ತದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ಪುರಭವನದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟದ ವಿಶೇಷ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದಶಕಗಳ ಹಿಂದೆ ರಿಕ್ಷಾ ಚಾಲಕರುಗಳ ದುಡಿಯುವ ಮತ್ತು ಜೀವನದ ಪರಿಸ್ಥಿತಿ ಇಂದಿನ ಅಭಿವೃದ್ಧಿ ಹೊಂದಿದ ಕಾಲಘಟ್ಟದಲ್ಲಿ ಬದಲಾ ಗಿದ್ದು ಎಲ್ಲರೂ ಅದಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಅನೇಕ ಚಾಲಕರು ಮೂರು ದಶಕಗಳಿಂದಲೂ ಹೆಚ್ಚುಕಾಲ ಒಂದೇ ನಿಲ್ದಾಣಗಳಲ್ಲಿ ದುಡಿಯುತ್ತ ಆ ನಿಲ್ದಾಣಗಳ ಅಭಿವೃದ್ದಿಯಲ್ಲೂ ತಮ್ಮ ಪಾಲನ್ನು ನೀಡಿದ್ದಾರೆ. ಸಂಘಟನೆ ರೂಪಿಸಿದ ವ್ಯವಸ್ಥೆಯ ಪರಿಧಿಯೊಳಗೆ ಹೊಸದಾಗಿ ಬರುವ ಸದಸ್ಯರು ಹೊಂದಿಕೊಳ್ಳಬೇಕು ಎಂದರು.
ಸಭೆಯಲ್ಲಿ ನಗರ ಮತ್ತು ಗ್ರಾಮೀಣ ಪರವಾನಿಗೆಗಳ ಗೊಂದಲಗಳು, ರಿಕ್ಷಾ ಚಾಲಕರ ವಾಹನ ವಿಮೆ, ಬಾಡಿಗೆ ದರ ಪರಿಷ್ಕರಣೆ, ಹೆಚ್ಚುವರಿ ನಿಲ್ದಾಣಗಳ ನಿರ್ಮಾಣ ಮುಂತಾದ ವಿಷಯಗಳ ಕುರಿತು ಅಂತಿಮ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಒಕ್ಕೂಟದ ಕಾನೂನು ಸಲಹೆಗಾರ ದಿನೇಶ್ ಸಿ.ನಾಯ್ಕ, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ವಿವಿಧ ವಲಯಗಳ ಅಧ್ಯಕ್ಷರುಗಳಾದ ಸಂತೋಷ್ ರಾವ್ ಕಾರ್ಕಳ, ಕೇಶವ ಸನಿಲ್ ಕರಾವಳಿ ಬೈಪಾಸ್, ಜಗದೀಶ್ ಮಲ್ಪೆ, ಸುಬ್ರಾಯ ಆಚಾರ್ ಮಣಿಪಾಲ, ಅಶೋಕ್ ಶೆಟ್ಟಿ ಮಣಿಪಾಲ, ಪ್ರಭಾಕರ್ ಹೆಬ್ರಿ, ಪ್ರಸಾದ್ ರೈಲ್ವೆ ಸ್ಟೇಷನ್, ಶಾಮ್ ಸಿಟಿ ಬಸ್ ನಿಲ್ದಾಣ, ಕರುಣಾಕರ್ ಸರ್ವಿಸ್ ಬಸ್ ನಿಲ್ದಾಣ, ರವೀಂದ್ರ ನಗರಸಭೆ, ರಘುನಂದ ಶಾರದಾ ಯೂನಿ ಯನ್, ಒಕ್ಕೂಟದ ಗೋಪಾಲ್ ಕೃಷ್ಣ ೆಟ್ಟಿ, ಪ್ರಭಾಕರ್ ಉಪಸ್ಥಿತರಿದ್ದರು.
ದಿನೇಶ್ ಸಾಮಂತ್ ರಿಕ್ಷಾ ಚಾಲಕರ ಗುಂಪು ವಾಹನ ವಿಮೆಯ ಕುರಿತು ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ನಾರಾಯಣ್ ಬಿ.ಕೆ. ವಾರ್ಷಿಕ ವರದಿ ಮತ್ತು ಹರೀಶ್ ಕೋಟಿಯನ್ ಲೆಕ್ಕ ಪತ್ರ ವಾಚನ ಮಾಡಿದರು ಒಕ್ಕೂಟದ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿದರು. ಗೌರವ ಸಲಹೆಗಾರ ವೆಂಕಟೇಶ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.







