ಡಿಎಂಕೆ ಮತ್ತು ಕೆಡಿಎಂಕೆ ನಡುವೆ ಸ್ಥಾನ ಹಂಚಿಕೆ ಒಪ್ಪಂದ

ಚೆನ್ನೈ,ಫೆ.26: ಡಿಎಂಕೆ ಮುಂಬರುವ ಲೋಕಸಭಾ ಚುನಾವಣೆಗಾಗಿ ಕೊಂಗನಾಡು ಮಕ್ಕಳ್ ದೇಶೀಯ ಕಚ್ಛಿ(ಕೆಎಂಡಿಕೆ) ಜೊತೆ ಸ್ಥಾನ ಹಂಚಿಕೆ ಒಪ್ಪಂದವನ್ನು ಮಂಗಳವಾರ ಅಂತಿಮಗೊಳಿಸಿತು.
ಇಲ್ಲಿಯ ಡಿಎಂಕೆ ಕೇಂದ್ರಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಮತ್ತು ಕೆಎಂಡಿಕೆ ನಾಯಕ ಈ.ಆರ್.ಈಶ್ವರನ್ ಅವರು ಒಪ್ಪಂದವನ್ನು ಅಂತಿಮಗೊಳಿಸಿದ್ದು,ಕೆಎಂಡಿಕೆೆ ಡಿಎಂಕೆಯ ‘ಉದಯಿಸುತ್ತಿರುವ ಸೂರ್ಯ’ನ ಚಿಹ್ನೆಯಡಿ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ.
ಕಾಂಗ್ರೆಸ್ ಮತ್ತು ಐಯುಎಂಎಲ್ ಜೊತೆಗೆ ಈಗಾಗಲೇ ಸ್ಥಾನ ಹಂಚಿಕೆ ಒಪ್ಪಂದಗಳನ್ನು ಡಿಎಂಕೆ ಮಾಡಿಕೊಂಡಿದೆ. ಕಾಂಗ್ರೆಸ್‌ಗೆ ರಾಜ್ಯದಲ್ಲಿಯ ಒಂಭತ್ತು ಮತ್ತು ನೆರೆಯ ಪುದುಚೇರಿಯಲ್ಲಿನ ಏಕೈಕ ಕ್ಷೇತ್ರ ಹಾಗೂ ಐಯುಎಂಎಲ್‌ಗೆ ಒಂದು ಕ್ಷೇತ್ರವನ್ನು ಅದು ಬಿಟ್ಟುಕೊಟ್ಟಿದೆ.
ತಮಿಳುನಾಡು 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.
Next Story





