ಎಲ್‌ಒಸಿಯಲ್ಲಿ ವಾಯು ದಾಳಿ ಬಳಿಕ ಕವನ ಟ್ವೀಟ್ ಮಾಡಿದ ಸೇನೆ

ಹೊಸದಿಲ್ಲಿ, ಫೆ. 27: ಭಾರತೀಯ ವಾಯು ಪಡೆ ಗಡಿ ನಿಯಂತ್ರಣ ರೇಖೆಯಲ್ಲಿ ಮಂಗಳವಾರ ವಾಯು ದಾಳಿ ನಡೆಸಿದ ಗಂಟೆಗಳ ಬಳಿಕ, ಸೇನೆ ಹಿಂದಿ ಕವನವೊಂದನ್ನು ಟ್ವೀಟ್ ಮಾಡಿದೆ. ‘‘ಒಂದು ವೇಳೆ ನೀನು ಶತ್ರು ಎದುರು ವಿನಯ ತೋರಿಸಿದರೆ ಹಾಗೂ ಸಾಧುವಾದರೆ, ಅವರು ನಿನ್ನನ್ನು ಕೌರವರು ಪಾಂಡವರನ್ನು ಪರಿಗಣಿಸಿದಂತೆ ಹೇಡಿ ಎಂದು ಭಾವಿಸುತ್ತಾರೆ.’’ ಎಂದು ಸೇನೆಯ ಟ್ವೀಟ್ ಹೇಳಿದೆ. ಹಿಂದಿ ಕವಿ ರಾಮಧಾರಿ ಸಿಂಗ್ ಅವರ ‘ದಿನಕರ್’ ಕವನವನ್ನು ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ಪ್ರಧಾನ ನಿರ್ದೇಶಕರು ತಮ್ಮ ಅಧಿಕೃತ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಪ್ರಬಲ ಸ್ಥಾನ ಹಾಗೂ ವಿಜಯಿಯಾಗುವ ಸಾಮರ್ಥ್ಯ ಇದ್ದರೆ ಮಾತ್ರ ನೀವು ಶಾಂತಿ ಹರಡಲು ಸಾಧ್ಯ ಎಂದು ಕವನ ಹೇಳಿದೆ.
ಫೆಬ್ರವರಿ 14ರಂದು ಸಿಆರ್‌ಪಿಎಫ್ ವಾಹನ ವ್ಯೂಹದ ಮೇಲೆ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ಮಂಗಳವಾರ ಈ ವಾಯು ದಾಳಿ ನಡೆಸಲಾಗಿದೆ.
Next Story





