ಅಲ್ಪವ್ಯಾಪ್ತಿಯ ತುರ್ತು ಪ್ರತಿಕ್ರಿಯೆ ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ ಭಾರತ

ಭುವನೇಶ್ವರ,ಫೆ.26: ಭಾರತೀಯ ಸೇನೆಗೆ ಮತ್ತಷ್ಟು ಬಲತುಂಬುವ ದೃಷ್ಟಿಯಿಂದ ಭಾರತ ಮಂಗಳವಾರ ಅಲ್ಪವ್ಯಾಪ್ತಿಯ ತುರ್ತು ಪ್ರತಿಕ್ರಿಯೆಯ ಕ್ಷಿಪಣಿ (ಕ್ಯೂಆರ್‌ಎಸ್‌ಎಎಂ)ಯ ಯಶಸ್ವಿ ಪರೀಕ್ಷೆ ನಡೆಸಿತು. ಈ ಮಾದರಿಯ ಎರಡು ಕ್ಷಿಪಣಿಗಳನ್ನು ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಒಡಿಶಾದ ಬಾಲಸೋರ್ ಜಿಲ್ಲೆಯ ಚಾಂದಿಪುರ ಪರೀಕ್ಷಾ ನೆಲೆಯಿಂದ ಪರೀಕ್ಷಾರ್ಥವಾಗಿ ಉಡಾಯಿಸಿತು.
ಬೇಕಾದ ದಿಕ್ಕಿಗೆ ತಿರುಗುವಂತಹ ಹಾರಟ ವಿಭಾಗವನ್ನು ಹೊಂದಿರುವ ಟ್ರಕ್ ಮೇಲಿಂದ ಈ ಕ್ಷಿಪಣಿಗಳನ್ನು ಉಡಾಯಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂವತ್ತು ಕಿ.ಮೀ ದೂರದವರೆಗಿನ ಗುರಿಗಳನ್ನು ತಲುಪುವ ಕ್ಯೂಆರ್‌ಎಸ್‌ಎಎಂ ಆಕಾಶದಲ್ಲಿ ಹಾರುವ ಗುರಿಗಳು, ಟ್ಯಾಂಕ್‌ಗಳು ಮತ್ತು ಬಂಕರ್‌ಗಳನ್ನು ಪುಡಿಗೈಯ್ಯುವ ಸಾಮರ್ಥ್ಯ ಹೊಂದಿದೆ. ದೇಸೀಯ ಕ್ಯೂಆರ್‌ಎಸ್‌ಎಎಂನ ಯಶಸ್ವಿ ಪರೀಕ್ಷೆ ನಡೆಸಿರುವ ಡಿಆರ್‌ಡಿಒವನ್ನು ರಕ್ಷಣಾ ಸಚಿವಾಲಯ ಅಭಿನಂದಿಸಿದೆ.
Next Story





