ಪಾಕ್ ಡ್ರೋನ್ ಅನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಭುಜ್, ಫೆ. 26: ಗುಜರಾತ್‌ನ ಕಚ್ಛ್ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ಸಮೀಪ ಮಂಗಳವಾರ ಪಾಕಿಸ್ತಾನದ ಡ್ರೋನ್ ಅನ್ನು ಭಾರತೀಯ ಸೇನೆ ಇಸ್ರೇಲ್ ಸ್ಪೈಡರ್ ಏರ್ ಡಿಫೆನ್ಸ್ ಮಿಸೈಲ್ ಬಳಸಿ ಹೊಡೆದು ಉರುಳಿಸಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಬೆಳಗ್ಗೆ 6 ಗಂಟೆಗೆ ಸ್ಫೋಟದ ಸದ್ದು ಕೇಳಿದ ಗ್ರಾಮ ನಿವಾಸಿಗಳು ಸ್ಥಳಕ್ಕೆ ತೆರಳಿದಾಗ ಯುಎವಿಯ ಅವಶೇಷಗಳು ಕಂಡು ಬಂದುವು ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಡ್ರೋನ್ ಅನ್ನು ಭಾರತೀಯ ಸೇನೆ ಹೊಡೆದುರುಳಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು, ‘‘ಅಂತಹ ಘಟನೆಯೊಂದು ನಡೆದಿದೆ. ನಾವು ಈ ವಿಷಯದ ಕುರಿತು ತನಿಖೆ ನಡೆಸುತ್ತಿದ್ದೇವೆ’’ ಎಂದು ಹೇಳಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ. ಶತ್ರು ವೈಮಾನಿಕ ವಾಹನಗಳನ್ನು ಹೊಡೆದುರುಳಿಸಲು ಸ್ಪೈಡರ್ ಅನ್ನು ಸೇನೆ ಇದೇ ಮೊದಲ ಭಾರಿಗೆ ಬಳಸುತ್ತಿದೆ. 2017ರಲ್ಲಿ ಈ ಸ್ಪೈಡರ್ ಏರ್ ಡಿಫೆನ್ಸ್ ಮಿಸೈಲ್ ಸೇನಾ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.
Next Story





