ಸಿಎ ನರಸಿಂಹ ನಾಯಕ್ ಆಯ್ಕೆ

ಉಡುಪಿ, ಫೆ. 26: ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆಯಾದ ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕ್ಕೌಂಟೆಂಟ್ಸ್ ಆಫ್ ಇಂಡಿಯಾದ ಉಡುಪಿ ಶಾಖಾಧ್ಯಕ್ಷರಾಗಿ ಉಡುಪಿಯ ಲೆಕ್ಕಪರಿಶೋಧಕ ಸಿಎ ನರಸಿಂಹ ನಾಯಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸಿಎ ಪ್ರದೀಪ್ ಜೋಗಿ, ಕಾರ್ಯದರ್ಶಿಯಾಗಿ ಸಿಎ ಕವಿತಾ ಎಂ.ಪೈ, ಖಜಾಂಚಿಯಾಗಿ ಸಿಎ ಲೋಕೇಶ್ ಶೆಟ್ಟಿ, ದಕ್ಷಿಣ ಭಾರತದ ವಿದ್ಯಾರ್ಥಿ ಸಂಘ ಉಡುಪಿ ಶಾಖಾಧ್ಯಕ್ಷರಾಗಿ ಸಿಎ ಪ್ರಭಾಕರ ನರಸಿಂಹ ನಾಯಕ್ ಆಯ್ಕೆಯಾಗಿದ್ದಾರೆಂದು ಪ್ರಕಟಣೆ ತಿಳಿಸಿದೆ.
Next Story





