ಉಳ್ಳಾಲ ದರ್ಗಾದಲ್ಲಿ ಮಾಹಿತಿ ಕೇಂದ್ರ ಉದ್ಘಾಟನೆ

ಉಳ್ಳಾಲ, ಫೆ.26: ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಹಝ್ರತ್ ಸೈಯದ್ ಮದನಿ ದರ್ಗಾ ಸಮಿತಿಯ ವತಿಯಿಂದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಅಭಿನಂದನೆ, ದರ್ಗಾ ಸಂದರ್ಶನಾರ್ಥಿಗಳ ಮಾಹಿತಿ ಕೇಂದ್ರ ಉದ್ಘಾಟನೆಯು ದರ್ಗಾ ವಠಾರದಲ್ಲಿ ರವಿವಾರ ಜರುಗಿತು.
ಮಾಹಿತಿ ಕೇಂದ್ರ ಉದ್ಘಾಟಿಸಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಉಳ್ಳಾಲ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು, ಪ್ರವಾಸೋದ್ಯಮ ಕೇಂದ್ರವಾಗಿ ಮಾರ್ಪಡುತ್ತಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಕೇಂದ್ರ ನಿಜಕ್ಕೂ ಪ್ರಯೋಜನಕಾರಿ ಎಂದರು.
ಸೈಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಅರಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಖತೀಬ್ ಅಬ್ದುಲ್ ಅಝೀಝ್ ಬಾಖವಿ, ಮುಫತ್ತಿಷ್ ಸುಲೈಮಾನ್ ಸಖಾಫಿ, ಪ್ರಾಂಶುಪಾಲ ಝೈನ್ ಸಖಾಫಿ, ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಪದಾಧಿಕಾರಿಗಳಾದ ಬಾವ ಮುಹಮ್ಮದ್, ಯು.ಕೆ.ಇಲ್ಯಾಸ್, ನೌಷಾದ್ ಮೇಲಂಗಡಿ, ಯು.ಟಿ.ಇಲ್ಯಾಸ್, ಅಝಾದ್ ಇಸ್ಮಾಯಿಲ್, ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಆಸಿಫ್ ಅಬ್ದುಲ್ಲಾ, ಅಮೀರ್, ಇಬ್ರಾಹೀಂ ಕಕ್ಕೆತೋಟ, ಅಯ್ಯೂಬ್ ಮಂಚಿಲ, ಅಝಾದ್ ಇಸ್ಮಾಯಿಲ್, ಎವರೆಸ್ಟ್ ಮುಸ್ತಫಾ,ಎ.ಕೆ.ಮೊಯ್ಯಿದಿನ್, ಖಾಸಿಂ, ಅಬ್ಬಾಸ್., ಹನೀಫ್ ಚೆಂಬುಗುಡ್ಡೆ, ಯು.ಕೆ.ಹಮ್ಮಬ್ಬ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ನ್ಯಾಯವಾದಿ ಕೆ.ಪಿ.ಅಬ್ದುಲ್ ಶುಕೂರ್ ಅವರನ್ನು ಸನ್ಮಾನಿಸಲಾಯಿತು. ಸಲಾಂ ಮದನಿ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.







