ಗಾಣೆಮಾರ್: ಫೆ. 28ರಂದು ಮಹ್ಫಿಲೇ ಬುರ್ದಾ, 2ನೆ ವಾರ್ಷಿಕ ಕಾರ್ಯಕ್ರಮ

ಬಂಟ್ವಾಳ, ಫೆ. 26: ಮಜ್ಲಿಸ್ ಗಾಣೆಮಾರ್ ಬಡಕಬೈಲ್ ಸಂಘಟನೆಯ ವತಿಯಿಂದ ಮಹ್ಫಿಲೇ ಬುರ್ದಾ ಹಾಗೂ 2ನೆ ವಾರ್ಷಿಕ ಕಾರ್ಯಕ್ರಮ ಫೆ. 28ರಂದು ಸಂಜೆ 5ಕ್ಕೆ ಗಾಣೆಮಾರ್ ವಠಾರದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ದುಲ್ ಮಜೀದ್ ಮುಸ್ಲಿಯಾರ್ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಬಿ.ಸಿ.ರೋಡಿನ ಪ್ರಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈಯದ್ ತ್ವಾಹಾ ತಂಙಳ್ ಬುರ್ದಾ ಮಜ್ಲಿಸ್‍ನ ನೇತೃತ್ವ ವಹಿಸುವರು. ಸೈಯದ್ ಕಿಲ್ಲೂರು ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಅಬ್ದುರ್ರವೂಫ್ ಆಕೋಡ್ ಅವರು ನಅತೇ ಶರೀಫ್ ಆಲಾಪನೆ ಮಾಡುವರು.
ಅಬ್ದುಲ್ ಖಾದರ್ ಮುಸ್ಲಿಯಾರ್, ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಸೈಯದ್ ನಿಝಾಮುದ್ದೀನ್ ಬಾಫಖಿ ತಂಙಳ್, ಹಾಫಿಳ್ ಅಬ್ದುಲ್ ಮಜೀದ್ ಮತ್ತಿತರರು ಉಪಸ್ಥಿತರಿರುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಸಿದ್ದೀಕ್ ಸಖಾಫಿ, ಅಸ್ರಾರ್, ಮುಹಮ್ಮದ್ ಉವೈಸ್, ಮುಹಮ್ಮದ್ ಸವಾದ್ ಉಪಸ್ಥಿತರಿದ್ದರು.
Next Story





