ಭಾರತೀಯ ವಾಯುಸೇನೆಯಿಂದ ದಾಳಿ: ಮೂಡುಬಿದಿರೆಯಲ್ಲಿ ಬಿಜೆಪಿ ಸಂಭ್ರಮ

ಮೂಡುಬಿದಿರೆ, ಫೆ.26: ಭಾರತೀಯ ವಾಯುಸೇನೆಯು ಪಾಕಿಸ್ತಾನ-ಭಾರತ ಗಡಿಯಲ್ಲಿದ್ದ ಉಗ್ರರ ನೆಲೆತಾಣಗಳನ್ನು ಧ್ವಂಸಗೊಳಿಸಿದ ಘಟನೆಯ ಬಗ್ಗೆ ಮೂಡುಬಿದಿರೆ ಬಿಜೆಪಿ ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.
ಬಿಜೆಪಿ ನಗರಾಧ್ಯಕ್ಷ ರಾಜೇಶ್ ಮಲ್ಯ, ಕಾರ್ಯದರ್ಶಿ ಹರೀಶ್‍ಎಂ.ಕೆ., ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಲಕ್ಷ್ಮಣ ಪೂಜಾರಿ, ಪ್ರಸಾದ್ ಕುಮಾರ್, ದಿನೇಶ್ ಪೂಜಾರಿ, ರಾಘವ ಹೆಗ್ಡೆ ಕೋಟೆಬಾಗಿಲು, ತುಕಾರಾಮ ಮಲ್ಯ, ಗಣೇಶ್ ಪೈ, ರಾಹುಲ್, ಸಾತ್ವಿಕ್ ಮಲ್ಯ, ರಾಕೇಶ್ ಪ್ರಭು ಮೊದಲಾದವರಿದ್ದರು.
Next Story





