ಕಾರ್ಮಿಕರನ್ನು ಬಳಸಿ ಬಿಸಾಡುವ ನೀತಿ ವಾಪಸ್ ಪಡೆಯಲು ಕೆಎಸ್‌ಡಬ್ಲೂಎಫ್ ಆಗ್ರಹ
ಬೆಂಗಳೂರು, ಫೆ.26: ಕಾರ್ಮಿಕರನ್ನು 15 ವರ್ಷಗಳಿಂದ ಬಳಸಿ ಬಿಸಾಡುವ ಇಂಧನ ಇಲಾಖೆಯ ನೀತಿಯನ್ನು ವಾಪಸ್ಸು ಪಡೆಯುವಂತೆ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್ ಗೌರವ ಅಧ್ಯಕ್ಷೆ ಎಸ್.ವರಲಕ್ಷ್ಮೀ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಪ್ರಸಕ್ತ ಸಾಲಿನ ಅಧಿಸೂಚನೆ ಪ್ರಕಾರ 3,646 ವಿವಿಧ ಹಂತದ ಹುದ್ದೆಗಳನ್ನು ತುಂಬುಲು ನಿರ್ಧರಿಸಿದೆ. ಈ ಅಧಿಸೂಚನೆ ಜಾರಿಯಾದರೆ ಐದು ಸಾವಿರ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಆರೋಪಿಸಿದರು.
ಇಂಧನ ಇಲಾಖೆ ಕಷ್ಟದಲ್ಲಿದ್ದಾಗ ಹೈಕೋರ್ಟ್‌ನಿಂದ ನಮಗೆ ಗುತ್ತಿಗೆ ಕಾರ್ಮಿಕರ ಬೇಕು ಎಂಬ ವಾದ ಮಂಡಿಸಿ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡಿದ್ದು, ಇಲಾಖೆ ಒಂದು ಕಡೆ ಸಂಘಟನೆಯ ಬಳಿ ಜಂಟಿ ಚರ್ಚೆ ಮಾಡಿ ಹೊಸದಾಗಿ ಯಾರನ್ನು ಗುತ್ತಿಗೆ ಕೆಲಸ ಮಾಡಲು ಅವಕಾಶವಿಲ್ಲ ಮತ್ತು ಹೈಕೋರ್ಟ್ ಆದೇಶದ ಪ್ರಕಾರ ಈ ಗುತ್ತಿಗೆ ಕಾರ್ಮಿಕರನ್ನು ಖಾಯಂ ಗೊಳಿಸಲು ಹೊಸ ಸ್ಕೀಂ ಹಾಗೂ ರೂಪು ರೇಷೆಗಳನ್ನು ಸಿದ್ಧಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿ 2002-03 ರ ಆದೇಶದಲ್ಲಿ ಕಾರ್ಮಿಕರ ವಯಸ್ಸುನ್ನು ನಿಗದಿಗೊಳಿಸಿ 240 ದಿನಕ್ಕೆ ಮಾತ್ರ ಮಾನವ ಸಂಪನ್ಮೂಲ ಬಳಸಬೇಕೆಂದು ಆದೇಶಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದರಿಂದ ಇಂಧನ ಇಲಾಖೆಯ ಪ್ರಗತಿಗೆ ಕಾರಣವಾದ ಅನುಭವಸ್ಥ ಕಾರ್ಮಿಕರು ಕೆಲಸ ಕಳೆದುಕೊಳ್ಳುವುದಷ್ಟೇ ಅಲ್ಲದೆ ಮಾನವ ಶ್ರಮವನ್ನು ಬಳಸಿ ಬಿಸಾಡುವ ಅಕ್ರಮ ಕಾರ್ಮಿಕ ವಿರೋಧಿ ನಿಲುಮೆಗಳನ್ನು ಜಾರಿ ಮಾಡಲಾಗುತ್ತಿದೆ. ಆದ್ದರಿಂದ ಈ ಅಧಿಸೂಚನೆಯನ್ನು ವಾಪಾಸ್ಸು ಪಡೆದು ಈ ಕಾರ್ಮಿಕರನ್ನು ಅನುಭವದ ಆಧಾರದಲ್ಲಿ ಖಾಯಂ ಮಾಡಲು ತಕ್ಷಣವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರು.







