Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಇಂಡಿಯನ್ ಸೋಶಿಯಲ್ ಫೋರಂನಿಂದ...

ಇಂಡಿಯನ್ ಸೋಶಿಯಲ್ ಫೋರಂನಿಂದ ಜುಬೈಲ್‌ನಲ್ಲಿ ಕ್ರಿಕೆಟ್ ಪಂದ್ಯಾವಳಿ

'ಸೋಶಿಯಲ್ ಫೋರಂ ಕಪ್ 2019' ಜಯಿಸಿದ ಅರಬಿಯನ್ ಕ್ಲೌಡ್ಸ್

ವಾರ್ತಾಭಾರತಿವಾರ್ತಾಭಾರತಿ26 Feb 2019 11:09 PM IST
share
ಇಂಡಿಯನ್ ಸೋಶಿಯಲ್ ಫೋರಂನಿಂದ ಜುಬೈಲ್‌ನಲ್ಲಿ ಕ್ರಿಕೆಟ್ ಪಂದ್ಯಾವಳಿ

ಜುಬೈಲ್, ಫೆ. 26: ಅಲ್ ಜುಬೈಲ್‌ನ ಅಲ್ ಫಲಾಹ್ ಮೈದಾನದಲ್ಲಿ ಫೆ.20ರಿಂದ 22ರವರೆಗೆ ಇಂಡಿಯನ್ ಸೋಶಿಯಲ್ ಫೋರಂ ಆಯೋಜಿಸಿದ್ದ ಸೋಶಿಯಲ್ ಫೋರಂ ಕಪ್ 2019 ಅನ್ನು ಅರೆಬಿಯನ್ ಕ್ಲೌಡ್ಸ್ ತನ್ನದಾಗಿಸಿದೆ.

ಕೊರೆಯುವ ಚಳಿಯ ನಡುವೆಯೂ ಕಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಮುಂದೆ ಕ್ರಿಕೆಟ್ ರಸದೌತಣವನ್ನು ಬಡಿಸಿದ ಅಂತಿಮ ಪಂದ್ಯದಲ್ಲಿ ಅರೆಬಿಯನ್ ಕ್ಲೌಡ್ಸ್ ತಂಡ ಈಸ್ಟರ್ನ್ ಬ್ಲೂ ತಂಡವನ್ನು ಮಣಿಸುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಫೆ. 20ರಂದು ಆರಂಭವಾದ ಪಂದ್ಯಾವಳಿಯಲ್ಲಿ ಹದಿನೈದು ತಂಡಗಳು ಸ್ಪರ್ಧಿಸಿದ್ದವು. ನಂತರ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳು ಫೆ.22ರಂದು ನಡೆದವು.

ಅಂತಿಮ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗಿಳಿದ ಈಸ್ಟರ್ನ್ ಬ್ಲೂ ತಂಡ ನಿಗದಿತ ಐದು ಓವರ್‌ಗಳಲ್ಲಿ 44 ರನ್‌ಗಳನ್ನು ಕಲೆ ಹಾಕುವ ಮೂಲಕ ಅರೆಬಿಯನ್ ಕ್ಲೌಡ್ಸ್‌ಗೆ ಕಠಿಣ ಸವಾಲನ್ನು ನೀಡಿತು. ಗುರಿ ಬೆನ್ನತ್ತಿದ ಅರೆಬಿಯನ್ ಕ್ಲೌಡ್ ಉತ್ತಮ ಆಟ ಪ್ರದರ್ಶಿಸಿ ಗೆಲ್ಲುವತ್ತ ಲಕ್ಷ ನೆಟ್ಟಿತ್ತು. ಆದರೆ ಈಸ್ಟರ್ನ್ ಬ್ಲೂನ ಮುಸ್ತಫಾ ಕಲ್ಲಡ್ಕ ಅಂತಿಮ ಓವರ್‌ನಲ್ಲಿ ಆಕ್ರಮಣಕಾರಿ ಬೌಲಿಂಗ್ ದಾಳಿ ಸಂಘಟಿಸಿದ ಕಾರಣ ಅಂತಿಮ ಎರಡು ಎಸೆತಗಳಲ್ಲಿ ಅರೆಬಿಯನ್ ಕ್ಲೌಡ್ ಗೆಲ್ಲಲು ಏಳು ರನ್‌ಗಳ ಅಗತ್ಯಕ್ಕೊಳಗಾಯಿತು. ಆದರೆ ಎದೆಗುಂದದ ಆಟಗಾರ ಸಾಹಿಲ್ ಕಾರ್ಕಳ ಚೆಂಡನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಅರಬಿಯನ್ ಕ್ಲೌಡ್‌ಗೆ ಜಯ ತಂದುಕೊಟ್ಟರು.

ಅಂತಿಮ ಪಂದ್ಯವನ್ನು ಇಂಡಿಯನ್ ಫ್ರೆಟರ್ನಿಟಿ ಫೋರಂನ ಅಧ್ಯಕ್ಷ ಇಮ್ತಿಯಾಝ್ ಸುರತ್ಕಲ್ ಮತ್ತು ಕೆಎಂಟಿ ಕೊ. ಸಿಇಒ ಅಬ್ದುಲ್ ರಝಾಕ್ ಬಲೂನು ಆಕಾಶಕ್ಕೆ ಹಾರಿಸುವ ಮೂಲಕ ಉದ್ಘಾಟಿಸಿದರು.

ಪಂದ್ಯಾವಳಿಯ ನಂತರ ನಡೆದ ಸಮಾರೋಪ ಸಮಾರಂಭದ ವೇದಿಕೆಗೆ ಮೂರು ದಶಕಗಳಿಂದ ಸೌದಿ ಅರಬಿಯಾದಲ್ಲಿ ಸಮಾಜ ಸೇವಕನಾಗಿ ದುಡಿದು ಇತ್ತೀಚೆಗೆ ದಮಾಮ್‌ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಎಮಿರೇಟ್ಸ್ ಅಬ್ದುಲ್ ಖಾದರ್ ಅವರ ಹೆಸರನ್ನಿಡಲಾಗಿತ್ತು. ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕೊ. ನಿರ್ದೇಶಕ ಶೇಖ್ ಕರ್ನಿರೆ, ಅಲ್ ಮುಝೈನ್ ಆ್ಯಂಡ್ ಪಾಟ್ನರ್ಸ್ ಕೊ. ಸಿಇಒ ಝಕಾರಿಯ ಜೋಕಟ್ಟೆ, ಸಲೆಹ್ ಅಯದ್ ಬಲ್ಹರಿತ್ ಎಸ್ಟ್. ಸಿಇಒ ಸಲಹುದ್ದೀನ್ ಸಲ್ಮಾನ್ ಅವರಿಗೆ ಇಂಡಿಯನ್ ಸೋಶಿಯಲ್ ಪೋರಂ ನ ಎನ್‌ಆರ್‌ಐ ಬಿಸಿನೆಸ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಮುಖ ಉದ್ಯಮಿಗಳಾದ ಕೆಎಂಟಿ ಕಾಂಟ್ರಾಕ್ಟಿಂಗ್ ಕಂ.ಯ ಸಿಇಒ ಅಬ್ದುಲ್ ರಝಾಕ್ ಮತ್ತು ಫತೆಹ್ ಅಲ್ ಜುಬೈಲ್ ಸಿಇಒ ಮುಷ್ತಾಕ್ ಅಹಮದ್ ಅವರಿಗೆ ಇಂಡಿಯನ್ ಸೋಶಿಯಲ್ ಫೋರಂನ ಕಮ್ಯುನಿಟಿ ಸರ್ವಿಸ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಜವಾನರಿಗೆ ಶ್ರದ್ಧಾಂಜಲಿ ಕೋರಿ ಮೌನ ಪ್ರಾರ್ಥನೆ ನೆರವೇರಿಸಲಾಯಿತು ಮತ್ತು ಭಾರತ ಹಾಗೂ ಯುಎಇಯ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕದ ಪೂರ್ವ ಪ್ರಾಂತ್ಯದ ಶರೀಫ್ ಜೋಕಟ್ಟೆ ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈಸ್ಟರ್ನ್ ಬ್ಲೂನ ಕಾಶಿಫ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ ಅರೆಬಿಯನ್ ಕ್ಲೌಡ್‌ನ ಸಾಹಿಲ್ ಉತ್ತಮ ಬ್ಯಾಟ್ಸ್‌ಮ್ಯಾನ್, ವಿಕೆಟ್ ಕೀಪರ್ ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಅರೆಬಿಯನ್ ಕ್ಲೌಡ್‌ನ ಮಹೇಶ್ ಉತ್ತಮ ಎಸೆತಗಾರ ಪ್ರಶಸ್ತಿ ಪಡೆದರು. ಸೂಪರ್ ಜುಬೈಲ್ ತಂಡ ಪ್ರೇಕ್ಷಕರ ಪ್ರಿಯ ತಂಡ ವಾಗಿ ಹೊರಹೊಮ್ಮಿತು. ಇಂಡಿಯನ್ ಸೋಶಿಯಲ್ ಫೋರಂ ಉಡುಪಿ ಜುಬೈಲ್ ವಿಭಾಗದ ಅಧ್ಯಕ್ಷ ಮುಹಮ್ಮದ್ ಶಮೀರ್ ಮೂಲೂರು ಪಂದ್ಯಾವಳಿಯನ್ನು ಸಂಯೋಜಿಸಿದ್ದರು. ಮುಹಮ್ಮದ್ ಫಿರೋಝ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಿರೂಪಿಸಿದರು. ಇಂಡಿಯನ್ ಸೋಶಿಯಲ್ ಫೋರಂ ಉಡುಪಿ ಜುಬೈಲ್ ವಿಭಾಗದ ಕಾರ್ಯಕಾರಿ ಮಂಡಳಿ ಸದಸ್ಯ ಸಲೀಂ ಉಡುಪಿ ಬಹುಮಾನ ವಿತರಣೆ ಸಮಾರಂಭವನ್ನು ನಿರೂಪಿಸಿದರು.

ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕದ ಪೂರ್ವ ಪ್ರಾಂತ್ಯದ ಶರೀಫ್ ಜೋಕಟ್ಟೆ, ಇಂಡಿಯನ್ ಫ್ರೆಟರ್ನಿಟಿ ಫೋರಂನ ಅಧ್ಯಕ್ಷ ಇಮ್ತಿಯಾಝ್ ಸುರತ್ಕಲ್, ಕೆಎಂಟಿ ಕೊ.ನ ಸಿಇಒ ಅಬ್ದುಲ್ ರಝಾಕ್, ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕೊ. ನಿರ್ದೇಶಕ ಶೇಖ್ ಕರ್ನಿರೆ, ಅಲ್ ಮುಝೈನ್ ಆ್ಯಂಡ್ ಪಾಟ್ನರ್ಸ್ ಕೊ. ಸಿಇಒ ಝಕಾರಿಯ ಜೋಕಟ್ಟೆ, ಸಲೆಹ್ ಅಯದ್ ಬಲ್ಹರಿತ್ ಎಸ್ಟ್. ಸಿಇಒ ಸಲಹುದ್ದೀನ್ ಸಲ್ಮಾನ್, ಫತೆಹ್ ಅಲ್ ಜುಬೈಲ್ ಸಿಇಒ ಮುಷ್ತಾಕ್ ಅಹಮದ್, ಐಐಎಫ್ ಕರ್ನಾಟಕ ಇಪಿ ಅಧ್ಯಕ್ಷ ಅತಾವುಲ್ಲಾ ಉಚ್ಚಿಲ್, ಇಂಡಿಯನ್ ಸೋಶಿಯಲ್ ಫೋರಂ ಇಪಿ ಅಧ್ಯಕ್ಷ ವಸೀಂ ರಬ್ಬಾನಿ, ಎಸ್‌ಎಫ್ ಕರ್ನಾಟಕ ಇಪಿ ಪ್ರಧಾನ ಕಾರ್ಯದರ್ಶಿ ಸಲಹುದ್ದೀನ್ ಮೈಸೂರು, ಐಎಸ್‌ಎಫ್ ಇಪಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಪುತ್ತೂರು, ಐಎಫ್‌ಎಫ್ ದಿಲ್ಲಿ ವಲಯ ಅಧ್ಯಕ್ಷ ನಝರುಲ್ ಇಸ್ಲಾಂ ಚೌದುರಿ, ಪ್ಲಾಂಟ್ ಸೊಲ್ಯೂಶನ್ಸ್ ಸಿಇಒ ಅಶ್ಫಕ್, ಅರೆಬಿಯನ್ ಕ್ಲೌಡ್ಸ್‌ನ ಅಝರ್, ರಾಯ್‌ಕಮ್ ಆಪರೇಶನ್ಸ್ ನಿರ್ದೇಶಕ ತಾಜಮ್ಮುಲ್ ಹುಸೇನ್, ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕೊ.ನ ಅಬ್ದುಲ್ ಅಝೀಝ್, ಐಎಸ್‌ಎಫ್ ಜುಬೈಲ್ ಉಡುಪಿ ವಿಭಾಗದ ಕಾರ್ಯಕಾರಿ ಮಂಡಳಿ ಸದಸ್ಯ ಸಲೀಂ ಉಡುಪಿ, ಐಎಸ್‌ಎಫ್ ಜುಬೈಲ್ ಮಂಗಳೂರು ವಿಭಾಗದ ಅಧ್ಯಕ್ಷ ನಝೀರ್ ತುಂಬೆ, ಜುಬೈಲ್ ಉಡುಪಿ ವಿಭಾಗದ ಅಧ್ಯಕ್ಷ ಶಮೀರ್ ಮೂಳೂರು, ಶಿಫಾ ಆಸ್ಪತ್ರೆ ಜುಬೈಲ್ ವ್ಯವಸ್ಥಾಪಕ ವಿಲಿಯಮ್ಸ್, ಐಎಫ್‌ಎಫ್ ಕೇಂದ್ರ ಸಮಿತಿ ಇಪಿ ಸದಸ್ಯ ಮೀರಜ್ ಅಹಮದ್ ಗುಲ್ಬರ್ಗಾ, ರೆನಾಲ್ಟ್ ಕಾರ್ಸ್ ಕಂ.ಯ ಫ್ಲೀಟ್ ಮ್ಯಾನೆಜರ್ ಮುಹಮ್ಮದ್ ಸಯೀದ್ ಹಾಗೂ ಇತರರು ಉಪಸ್ಥಿತರಿದ್ದರು.

ಪಂದ್ಯಾವಳಿಯ ಪ್ರಾಯೋಜಕರು, ಗೋಲ್ಡನ್ ಪ್ರಾಯೋಜಕರು: ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕೊ. ಮತ್ತು ಸಲೆಹ್ ಅಯದ್ ಬಲ್ಹರಿತ್ ಎಸ್ಟ್.

ರಜತ ಪ್ರಾಯೋಜಕರು: ಅಲ್ ಮುಝೈನ್ ಆ್ಯಂಡ್ ಪಾಟ್ನರ್ಸ್ ಕೊ., ಕೆಎಂಟಿ ಕಾಂಟ್ರಾಕ್ಟಿಂಗ್ ಕಂ., ಯುನೈಟೆಡ್ ಟೆಕ್, ಫತೆಹ್ ಅಲ್ ಜುಬೈಲ್ ಟ್ರೇಡಿಂಗ್ ಎಸ್ಟ್., ಎಕೆಎ ಇಂಡಸ್ಟ್ರಿಯಲ್ ಸರ್ವಿಸ್, ಪ್ಲಾಂಟ್ ಸೊಲ್ಯೂಶನ್ಸ್, ಕಂಪಾಸ್ ಲಾಜಿಸ್ಟಿಕ್ಸ್. ಕಂಚು ಪ್ರಾಯೋಜಕರು: ರೆನಾಲ್ಟ್ ಕಾರ್ ಕಂ., ಗಲ್ಫ್ ಏಶ್ಯಾ ಆಸ್ಪತ್ರೆ, ಆಂಪ್ಲಿಟ್ಯೂಡ್ ಕಂ., ಟ್ರೈಡೆಂಟ್ ಕಾಂಟ್ರಾಕ್ಟಿಂಗ್ ಕಂ., ವೈಟ್ ಸ್ಟೋನ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X