ಸಾಮಾಜಿಕ ಜಾಲತಾಣದಿಂದ ದೂರವಿರಿ
ಶೂಟರ್‌ಗಳಿಗೆ ಕೋಚ್ ಕಿವಿಮಾತು

ಹೊಸದಿಲ್ಲಿ, ಫೆ.26: ವಿಶ್ವ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಸ್ಪರ್ಧಿಗಳ ನಿರಾಶಾದಾಯಕ ಪ್ರದರ್ಶನದಿಂದ ಬೇಸರಗೊಂಡಿರುವ ಜೂನಿಯರ್ ತಂಡದ ಕೋಚ್ ಜಸ್ಪಾಲ್ ರಾಣಾ ತಮ್ಮ ಶಿಷ್ಯರಿಗೆ ಪೋನ್ ಬಳಕೆ ಕಡಿಮೆಗೊಳಿಸಿ ಸಾಮಾಜಿಕ ಜಾಲತಾಣಗಳಿಂದ ದೂರವಿರಲು ಮಂಗಳವಾರ ಸಲಹೆ ನೀಡಿದ್ದಾರೆ. ಅಲ್ಲದೆ ಅಭಿನವ್ ಬಿಂದ್ರಾ ಅವರ ಸಾಧನೆಯನ್ನು ಅನುಸರಿಸಬೇಕು. ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬೇಡಿ ಎಂದಿದ್ದಾರೆ.
ಒಲಿಂಪಿಕ್ಸ್ ಕೋಟಾ ಸ್ಥಾನಕ್ಕೆ ಪ್ರಯತ್ನಿಸುತ್ತಿರುವ ಏಶ್ಯನ್ ಗೇಮ್ಸ್ ಪದಕ ವಿಜೇತ ಶೂಟಿಂಗ್ ತಾರೆ ಮನು ಭಾಕರ್ ಮಂಗಳವಾರ ಐಎಸ್‌ಎಸ್‌ಎಫ್ ವಿಶ್ವಕಪ್‌ನ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್‌ಗೆ ಅರ್ಹತೆ ಗಳಿಸಲು ವಿಫಲರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಸದ್ಯ ಭಾಕರ್ ಒಲಿಂಪಿಕ್ಸ್ ಕೋಟಾ ಸ್ಥಾನ ಪಡೆಯಲು ಬೀಜಿಂಗ್‌ನಲ್ಲಿ ನಡೆಯುವ ವಿಶ್ವಕಪ್‌ವರೆಗೆ ಕಾಯಬೇಕಾಗಿದೆ.
‘‘ಇದು ಪ್ರಥಮ ಹಂತವಾಗಿರುವುದರಿಂದ ನಮ್ಮ ಶೂಟರ್‌ಗಳತ್ತ ಹೆಚ್ಚು ಗಮನಹರಿಸಬೇಕಿದೆ, ಕೋಟಾ ಸ್ಥಾನಗಳನ್ನು ಗಳಿಸುವುದು ಕಷ್ಟಕರವೇನಲ್ಲ, ಆದರೆ ನಾವು ಈಗ ಒಲಿಂಪಿಕ್ಸ್ ಕುರಿತು ಮಾತನಾಡುತ್ತಿದ್ದೇವೆ. ಈ ವರ್ಷದ ಅಂತ್ಯದೊಳಗೆ ಇನ್ನೂ ನಮಗೆ ಸ್ಪರ್ಧೆಗಳಿವೆ. ಇನ್ನೂ ಹಲವು ಒಲಿಂಪಿಕ್ ಕೋಟಾಗಳನ್ನು ಪಡೆಯುವೆವು’’ ಎಂದು ರಾಣಾ ಹೇಳಿದ್ದಾರೆ.





