ಚೆಸ್: ನವೆಂಬರ್‌ನಲ್ಲಿ ಕೋಲ್ಕತಾಗೆ ಕಾರ್ಲ್‌ಸನ್
ಕೋಲ್ಕತಾ, ಫೆ.26: ವಿಶ್ವ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರು ಗ್ರಾಂಡ್ ಚೆಸ್ ಟೂರ್‌ನ(ಜಿಸಿಟಿ) ರ್ಯಾಪಿಡ್ ಹಾಗೂ ಬ್ಲಿಟ್ಝ್ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಲು ನವೆಂಬರ್‌ನಲ್ಲಿ ಕೋಲ್ಕತಾಕ್ಕೆ ಆಗಮಿಸಲಿದ್ದಾರೆ.
ನ.20-27ರ ಅವಧಿಯಲ್ಲಿ ನಡೆಯಲಿರುವ 8ನೇ ಹಂತದ ಪೆನಾಲ್ಟಿಮೇಟ್ ಸ್ಪರ್ಧೆಯಲ್ಲಿ ಕಾರ್ಲ್‌ಸನ್ ಭಾಗವಹಿಸಲಿದ್ದಾರೆ. ಈ ಟೂರ್ನಿಯು ಮಾಜಿ ವಿಶ್ವ ಚಾಂಪಿಯನ್ ದಂತಕತೆ ಗ್ಯಾರಿ ಕ್ಯಾಸ್ಪರೊವ್ ಅವರಿಂದ ಪ್ರಭಾವಿತರಾಗಿ 2015ರಲ್ಲಿ ಆರಂಭವಾಗಿತ್ತು. ಭಾರತದ ‘ಸಿಟಿ ಆಫ್ ಜಾಯ್’ ಎಂದು ಹೆಸರಾದ ಕೋಲ್ಕತಾದಲ್ಲಿ ಹಾಲಿ ವಿಶ್ವ ಚಾಂಪಿಯನ್ ಮೊದಲ ಬಾರಿ ಆಟವಾಡಲಿದ್ದಾರೆ. ಜಿಸಿಟಿಯಲ್ಲಿ ವಿಶ್ವದ 12 ಆಟಗಾರರು ಭಾಗವಹಿಸುತ್ತಿದ್ದು, 7 ಟೂರ್ನಿಗಳು ಹಾಗೂ ಲಂಡನ್‌ನಲ್ಲಿ ಫೈನಲ್‌ನ್ನು(ನ.30-ಡಿ.4) ಜಿಸಿಟಿ ಒಳಗೊಂಡಿದೆ. ಸ್ಪರ್ಧಿಗಳು ಕ್ಲಾಸಿಕಲ್ ಹಾಗೂ 5 ರ್ಯಾಪಿಡ್ ಹಾಗೂ ಬ್ಲಿಟ್ಝ್ ವಿಭಾಗಗಳಲ್ಲಿ ಯಾವುದೇ ಮೂರರಲ್ಲಿ ಸ್ಪರ್ಧಿಸಲಿದ್ದಾರೆ.
Next Story





