Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶೇ.10 ಮೀಸಲಾತಿ ಮತ್ತು ಮೀಸಲಾತಿ ಇಲ್ಲದ...

ಶೇ.10 ಮೀಸಲಾತಿ ಮತ್ತು ಮೀಸಲಾತಿ ಇಲ್ಲದ ಶೂದ್ರರು

ಕಾಂಚ ಐಲಯ್ಯ ಶೆಫರ್ಡ್ಕಾಂಚ ಐಲಯ್ಯ ಶೆಫರ್ಡ್27 Feb 2019 12:15 AM IST
share
ಶೇ.10 ಮೀಸಲಾತಿ ಮತ್ತು ಮೀಸಲಾತಿ ಇಲ್ಲದ ಶೂದ್ರರು

ಭಾಗ-2

ಶೂದ್ರರನ್ನು ತನ್ನ ಭಾಗವೆಂದು ಹೇಳಿದ ಹಿಂದೂ ಧರ್ಮವು, (ಜನಿವಾರ ಧರಿಸದ) ಅವರು ದ್ವಿಜ (ಬ್ರಾಹ್ಮಣ)ರಲ್ಲವಾದ್ದರಿಂದ ಅವರಿಗೆ ಪುರೋಹಿತ/ಅರ್ಚಕ/ವೈದಿಕ ಸ್ಥಾನವನ್ನು (ಪ್ರೀಸ್ಟ್‌ಹುಡ್) ನೀಡಲು ನಿರಾಕರಿಸುತ್ತಲೇ ಬಂದಿದೆ. ಅದು ಹಿಂದೂ ಶಾಸ್ತ್ರಗಳನ್ನು, ಪವಿತ್ರಗ್ರಂಥಗಳನ್ನು ಅರ್ಥೈಸುವ, ವ್ಯಾಖ್ಯಾನಿಸುವ ತತ್ವಶಾಸ್ತ್ರೀಯ ಹುದ್ದೆಗಳನ್ನು ಅವರಿಗೆ ನೀಡಲು ನಿರಾಕರಿಸುತ್ತಿದೆ. ಆರೆಸ್ಸೆಸ್ ಮತ್ತು ಅದರ ಮಿತ್ರ ಸಂಘಟನೆಗಳನ್ನು ಅದು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ತೋಳ್ಬಲವಾಗಿ ಬಳಸಿಕೊಂಡಿದೆ. ಹಿಂದೂ ಧರ್ಮದಲ್ಲಿ ಸರ್ವಾಂಗೀಣ ಸುಧಾರಣೆಗಳಿಗಾಗಿ ಅದು ಎಂದೂ ಹೋರಾಟ ಮಾಡಿದ್ದಿಲ್ಲ.

ಸಂಘ ಪರಿವಾರ ಶಕ್ತಿಗಳು ವೌನವಾಗಿ ವರ್ಣಧರ್ಮವನ್ನು ಪಾಲಿಸುತ್ತ ಬಂದಿವೆ. ತಮ್ಮ ಸಂಘಟನೆಯಲ್ಲೂ ವರ್ಣಧರ್ಮವನ್ನು ಪಾಲಿಸುತ್ತ ಬಂದಿವೆ. ಅಲ್ಲದೆ ಧಾರ್ಮಿಕ ಶಾಲೆಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಶೂದ್ರರಿಗೆ ಎಲ್ಲ ಧಾರ್ಮಿಕ ಹುದ್ದೆಗಳನ್ನು ನೀಡುವಂತೆ ಅವು ಯಾವತ್ತೂ ಹಕ್ಕೊತ್ತಾಯ ಸಲ್ಲಿಸಿದ್ದೂ ಇಲ್ಲ. ಆರೆಸ್ಸೆಸ್‌ನಲ್ಲಿ ಸರಸಂಘ ಚಾಲಕ ಮತ್ತು ಇತರ ಸೈದ್ಧಾಂತಿಕ ನಾಯಕತ್ವದಂತಹ ಉನ್ನತ ಹುದ್ದೆಗಳನ್ನು ಅವು ಜತನದಿಂದ ಬ್ರಾಹ್ಮಣರ ಕೈಯಲ್ಲೇ ಉಳಿಯುವಂತೆ ನೋಡಿಕೊಂಡಿವೆ. ಬನಿಯಾಗಳು ಬಂಡವಾಳದ ಮೇಲೆ ನಿಯಂತ್ರಣ ಹೊಂದಿರುವುದರಿಂದ ಅವರಿಗೆ ಮಹತ್ವಪೂರ್ಣ ಸ್ಥಾನವನ್ನು ನೀಡಲಾಗಿದೆ.

1967ರಲ್ಲಿ ಪ್ರಾದೇಶಿಕ ಶೂದ್ರಶಕ್ತಿಗಳು ಅಧಿಕಾರಕ್ಕೆ ಬಂದವು. 2014ರಲ್ಲಿ ಆರೆಸ್ಸೆಸ್ ರಾಷ್ಟ್ರೀಯ ಅಧಿಕಾರದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿ ಅಧಿಕಾರಕ್ಕೆ ಬಂತು. ಈ ಅವಧಿಯು ಶೂದ್ರರ ಮೇಲ್ಮೈ ಜಾತಿಗಳಿಗೆ ಜ್ಞಾನೋದಯದ ಒಂದು ಅವಧಿಯಾಯಿತು. ಭಾರತದ ಬೃಹತ್ ಉದ್ಯಮಗಳಿಗೆ ಆಪ್ತರಾಗಿರುವುದರಿಂದ ನರೇಂದ್ರಮೋದಿ ಮತ್ತು ಅಮಿತ್ ಶಾ ಈಗ ಅವರು ಬಯಸಿರುವ ಹುದ್ದೆಗಳನ್ನು ಪಡೆದರು. ಅದಾನಿ ಮತ್ತು ಅಂಬಾನಿಯ ಹೊರತಾಗಿ ಇವರಿಬ್ಬರು ದಿಲ್ಲಿಗೆ (ಅಧಿಕಾರದ ಹುದ್ದೆಗಳಿಗೆ) ಬರುತ್ತಿರಲಿಲ್ಲ. ಆರೆಸ್ಸೆಸ್ ಹಿಂದೂ ದೇವರುಗಳಿಗೆ ಶರಣಾಗುವುದಕ್ಕಿಂತ ಹೆಚ್ಚಾಗಿ ಬಂಡವಾಳಕ್ಕೆ ಶರಣಾಯಿತು.

2014ರ ನಂತರ, ಮರಾಠರು (ಮಹಾರಾಷ್ಟ್ರ), ಯಾದವರು ಮತ್ತು ದಲಿತರು (ಉತ್ತರ ಪ್ರದೇಶ), ಜಾಟರು (ಹರ್ಯಾಣ) ಮತ್ತು ಇತರ ಕೆಳಜಾತಿಗಳು (ರಾಜಸ್ಥಾನ)- ಅಂದರೆ ಇಂತಹ ಶೂದ್ರರು ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಆರೆಸ್ಸೆಸ್‌ನ ಒಳಗಿನವರಾಗಿರುವ ಕ್ಷತ್ರಿಯರನ್ನು, ಬ್ರಾಹ್ಮಣರನ್ನು ಮತ್ತು ಬನಿಯಾಗಳನ್ನು ಅಧಿಕಾರಕ್ಕೆ ತರಲಾಯಿತು. ಮೋಹನ್ ಭಾಗವತ್ (ಬ್ರಾಹ್ಮಣ), ಮೋದಿ, ಅಮಿತ್ ಶಾ (ಬನಿಯಾ) ಮತ್ತು ಯೋಗಿ ಆದಿತ್ಯ ನಾಥ್ (ಯೋಗಿಯ ವೇಷದಲ್ಲಿರುವ ಕ್ಷತ್ರಿಯ)-ಇವರೆಲ್ಲರೂ ಭಾರತದ ಬೃಹತ್ ಬಂಡವಾಳದಿಂದ ನಿರ್ದೇಶಿಸಲ್ಪಡುತ್ತಿದ್ದಾರೆ. ಶೂದ್ರ ಜಮೀನ್ದಾರರ ಅಧಿಕಾರ ಕೊನೆಗೊಂಡಿತು. ಅದರ ಜಾಗದಲ್ಲಿ ಜಾಗತಿಕ ಬಂಡವಾಳಶಾಹಿ ಹಿಂದೂ ಬ್ರಾಹ್ಮಣ-ಬನಿಯಾ-ಕ್ಷತ್ರಿಯ- ಅಧಿಕಾರವು, ಅಧಿಕಾರ ಕೇಂದ್ರವು ಸಂಪೂರ್ಣವಾಗಿ ಸ್ಥಾಪಿಸಲ್ಪಟ್ಟಿತು.

ಆರೆಸ್ಸೆಸ್-ಬಿಜೆಪಿ ಬಂಡವಾಳಶಾಹಿ ಪರ ಕಾರ್ಯಸೂಚಿಯು (ಅಜೆಂಡಾ) ಬನಿಯಾಗಳಿಗೆ ಹಾಗೂ ಬ್ರಾಹ್ಮಣರಿಗೆ ಲಾಭದಾಯಕವಾಯಿತು. ಯಾಕೆಂದರೆ ಅವರು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಔದ್ಯಮಿಕ ಅರ್ಥವ್ಯವಸ್ಥೆಯ ಶೇ.92ರಷ್ಟನ್ನು ನಿಯಂತ್ರಿಸುತ್ತಿದ್ದರು. ಅಲ್ಲದೆ ಜಾಗತಿಕವಾದ ಮಾಲ್‌ಗಳ ಸೇವಾರಂಗ ಕೂಡ ಅವರ ಕೈಗಳಲ್ಲೇ ಇದೆ. ಈ ಹಿಂದೆ ಜಮೀನ್ದಾರರಾಗಿದ್ದ ಶೂದ್ರರು ಉದ್ಯಮಪತಿಗಳೂ ಆಗಿರಲಿಲ್ಲ; ಅವರು ಸೇವಾರಂಗದವನ್ನೂ ನಿಯಂತ್ರಿಸುತ್ತಿರಲಿಲ್ಲ. ಶೂದ್ರರು ಕಾರ್ಯಾಚರಿಸುವ ಕೃಷಿರಂಗವು, ಉದ್ಯಮ ಮತ್ತು ಮಾಲ್ ಅರ್ಥವ್ಯವಸ್ಥೆಯೊಂದಿಗೆ ಸಂಪೂರ್ಣವಾಗಿ ಕಟ್ಟಿಹಾಕಿ ಕೊಂಡಿತು. ಅವರ ಸ್ವ-ಉದ್ಯೋಗ ಸಾಮರ್ಥ್ಯ ನಾಶವಾಗಿ ಹೋಯಿತು. ಸ್ವಾತಂತ್ರೋತ್ತರದ ಸರಕಾರಿ ಸಂಪನ್ಮೂಲ ಹಾಗೂ ಖಾಸಗಿ ಮಾಲಕತ್ವದ ಉದ್ಯಮಕ್ಕೆ ಧೀರೂ ಭಾ ಅಂಬಾನಿ(ಬನಿಯಾ) ಬೆನ್ನೆಲುಬಾದರೆ ಸರಕಾರದಿಂದ ನೆರವು ಪಡೆದ ಸಾಫ್ಟ್‌ವೇರ್ ಉದ್ಯಮವು ದಕ್ಷಿಣ ಭಾರತದ ಎನ್.ಆರ್. ನಾರಾಯಣ ಮೂರ್ತಿ(ಬ್ರಾಹ್ಣಣ)ಯವರ ಪ್ರಾಬಲ್ಯಕ್ಕೆ ಒಳಗಾಯಿತು. ಇಂಗ್ಲಿಷ್ ಶಿಕ್ಷಣ ಪಡೆದ ಬ್ರಾಹ್ಮಣರು-ಬನಿಯಾಗಳು ಸರಕಾರಿ ರಂಗ ಹಾಗೂ ಖಾಸಗಿ ರಂಗದ ಉದ್ಯೋಗಾವಕಾಶಗಳ ಸಂಪೂರ್ಣ ಉಪಯೋಗ ಪಡೆದರು. ಮೀಡಿಯಾ ಕೂಡ ಹೆಚ್ಚು ಕಡಿಮೆ ಅವರ ಕೈಗಳಲ್ಲೇ ಇತ್ತು. ಉದಾಹರಣೆಗೆ ಪ್ರಣಯ್ ರಾಯ್ ಆರಂಭಿಸಿದ ಖಾಸಗಿ ಟಿ.ವಿ. ರಂಗವು, ಇಂಗ್ಲಿಷ್ ಶಿಕ್ಷಣ ಪಡೆದ ಬ್ರಾಹ್ಮಣ-ಬನಿಯಾ-ಕಾಯಸ್ತ ಪುರುಷರನ್ನು ಹಾಗೂ ಮಹಿಳೆಯರನ್ನು ನೌಕರಿಗೆ ನೇಮಿಸಿಕೊಂಡಿತು. ದಿಲ್ಲಿಯ ಆಸುಪಾಸಿನ ಜಮೀನ್ದಾರ ಶೂದ್ರರು ಕೂಡ ಈ ರಂಗದೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಅವರ ಇಂಗ್ಲಿಷ್ ಶಿಕ್ಷಣದ ಕೊರತೆ ಮತ್ತು ಸಾಮಾಜಿಕ ಹಿಂದುಳಿಯುವಿಕೆ ಇದಕ್ಕೆ ಕಾರಣ. ಈ ಇಡೀ ಪ್ರತಿಕ್ರಿಯೆಯಲ್ಲಿ ಖಾಸಗಿ, ದುಬಾರಿ ಶುಲ್ಕ ಪಡೆಯುವ ಇಂಗ್ಲಿಷ್ ಮಾಧ್ಯಮ ಶಿಕ್ಷಣವು ಬಹಳ ಮುಖ್ಯವಾದ ಪಾತ್ರ ವಹಿಸಿತು. ಇದನ್ನು ಪಡೆಯಲಾಗದ ಜಮೀನ್ದಾರ ಶೂದ್ರರು ಪ್ರಾದೇಶಿಕ ಭಾಷೆಯ ಮತ್ತು ಕೆಳಮಟ್ಟದ ಶಿಕ್ಷಣ ಪಡೆದು ಹೊರಗೆಯೇ ಉಳಿದರು.

ಆರೆಸ್ಸೆಸ್ ಅವರಲ್ಲಿ ಹಲವರನ್ನು ತನ್ನ ತೆಕ್ಕೆಯೊಳಕ್ಕೆ ಎಳೆದುಕೊಂಡು ಸಂಘದ ವಿವಿಧ ಹುದ್ದೆಗಳಿಗೆ ನೇಮಿಸಿಕೊಂಡಿತ್ತು ಮತ್ತು ಅವರನ್ನು ಮತಗಳನ್ನು ಗಳಿಸುವುದಕ್ಕಾಗಿ ಹಾಗೂ ಮುಸ್ಲಿಂ ವಿರೋಧಿ ಚಳವಳಿಗಾಗಿ ಬಳಸಿಕೊಂಡಿತು. ಮೋದಿ ಮತ್ತು ಅಮಿತ್ ಶಾರವರಂತಹ ಮಿಲಿಟಂಟ್ (ಉಗ್ರ) ಹಿಂದೂ ನಾಯಕರು ಅವರ ಹೀರೋಗಳಾದರು. ಆದರೆ (ಮೋದಿ ಮತ್ತು ಶಾ) ಅಧಿಕಾರಕ್ಕೆ ಬಂದ ಬಳಿಕ, ನಿರ್ದಿಷ್ಟವಾಗಿ ಹೇಳಬೇಕೆಂದರೆ ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಗೆ ಬಂದ ನಂತರ, ಅವರಿಬ್ಬರೂ ದೊಡ್ಡ ಉದ್ಯಮಿಯ ಸೇವೆ ಮಾಡಲು ಯೋಚಿಸಿದರು. ಹಾಗೆಯೇ ಅವರು ರಾಶಿ ಮಾಲ್ ಸೇವಾ ಅರ್ಥ ವ್ಯವಸ್ಥೆಯ ಸೇವೆಗೆ ನಿಂತರು. ಇವೆಲ್ಲವನ್ನು ನೋಡಿದ ಬಳಿಕ ಶೂದ್ರರಿಗೆ ತಮಗೆ ದಿಕ್ಕೇ ಕಾಣದಾಗಿದೆ ಎಂಬ ಜ್ಞಾನೋದಯವಾಯಿತು. ಈಗ ಅವರಿಗೆ (ಶೂದ್ರರಿಗೆ) ತಾವು ನವ-ಕ್ಷತ್ರಿಯರಲ್ಲ, ನವ ಬ್ರಾಹ್ಮಣರು ಎಂದು ಮನವರಿಕೆಯಾಯಿತು. ಈಗ ಅವರ ಸಂಸ್ಕೃತೀಕರಣದ ಮುಖವಾಗಿ ಕಳಚಿಬೀಳುತ್ತಿದೆ. ಅವರು ಈ ಹಂತದಲ್ಲಿ ನಾನು ದಲಿತೀಕರಣ (ದಲಿತೈಜೇಶನ್) ಎಂದು ಕರೆಯುವ ಪ್ರಕ್ರಿಯೆಯ ಒಳಕ್ಕೆ ಚಳಿಸಲಾರಂಭಿಸಿದರು. ಹಲವು ಶೂದ್ರ ಜಾತಿಗಳು ಎಸ್ಸಿ ವರ್ಗಕ್ಕೆ ಕೂಡ ಸೇರಲು ಬಯಸುವುದಕ್ಕೆ ಇದೇ ಕಾರಣ. ಇದು ಆರೆಸ್ಸೆಸ್‌ಗೆ ಕಿರಿಕಿರಿ ಉಂಟುಮಾಡುವ ಒಂದು ಬೆಳೆವಣಿಗೆಯಾಗಿದೆ.


ಕೃಪೆ: countercurrents

share
ಕಾಂಚ ಐಲಯ್ಯ ಶೆಫರ್ಡ್
ಕಾಂಚ ಐಲಯ್ಯ ಶೆಫರ್ಡ್
Next Story
X