ಪಾಕ್ ಉಪ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ಸಲ್ಲಿಸಿದ ಭಾರತ

ಹೊಸದಿಲ್ಲಿ,ಫೆ.27: ಪಾಕಿಸ್ತಾನದ ಉಪ ರಾಯಭಾರಿ ಸೈಯದ್ ಹೈದರ್ ಶಾ ಅವರನ್ನು ಬುಧವಾರ ಇಲ್ಲಿಯ ಸೌಥ್ ಬ್ಲಾಕ್‌ಗೆ ಕರೆಸಿಕೊಂಡ ಭಾರತವು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿಗೆ ಪಾಕಿಸ್ತಾನದ ವಾಯುಪಡೆಯ ಪ್ರಯತ್ನದ ಕುರಿತು ಬಲವಾದ ಪ್ರತಿಭಟನೆಯನ್ನು ಸಲ್ಲಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿದವು.
ಇದೇ ವೇಳೆ ಭಾರತೀಯ ಪೈಲಟ್‌ನೋರ್ವನನ್ನು ಪಾಕಿಸ್ತಾನಿ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಶಾ ಅವರು ಭಾರತೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿದವು.
ಅತ್ತ ಇಸ್ಲಮಾಬಾದ್‌ನಲ್ಲಿ ಭಾರತದ ಪ್ರಭಾರ ರಾಯಭಾರಿ ಗೌರವ ಅಹ್ಲುವಾಲಿಯಾ ಅವರನ್ನು ಕರೆಸಿಕೊಂಡ ಪಾಕಿಸ್ತಾನದ ವಿದೇಶಾಂಗ ಕಚೇರಿಯು ನಿಯಂತ್ರಣ ರೇಖೆಯಲ್ಲಿ ನಾಲ್ವರು ನಾಗರಿಕರ ಸಾವಿಗೆ ಕಾರಣವಾದ ಭಾರತೀಯ ಪಡೆಗಳಿಂದ ‘ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ’ಗಳನ್ನು ಖಂಡಿಸಿದೆ.
Next Story





