ಶಾಸಕರಿಂದ ಕೆಮ್ತೂರು ತೂಗುಸೇತುವೆ ಪರಿಶೀಲನೆ

ಉಡುಪಿ, ಫೆ.27: ಹಾನಿಗೊಂಡು ದುರಸ್ಥಿಗೊಳ್ಳಬೇಕಿರುವ ಅಲೆವೂರು ಗ್ರಾಪಂ ವ್ಯಾಪ್ತಿಯ ಕೆಮ್ತೂರಿನ ತೂಗು ಸೇತುವೆಯನ್ನು ಇಂದು ಸ್ಥಳಕ್ಕೆ ಭೇಟಿ ನೀಡಿದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಅನುದಾನ ನೀಡಿ ದುರಸ್ಥಿ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಸ್ಥಳೀಯ ಪಂಚಾಯತ್ ಸದಸ್ಯ ಕೃಷ್ಣ ಜತ್ತನ್ನ, ಹಿರಿಯರಾದ ಹಂಸರಾಜ್ ಸನಿಲ್, ಆಶಿಶ್ ಶೆಟ್ಟಿ, ಗೋವಿಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Next Story





