ಭಾರತ-ಪಾಕ್ ಉದ್ವಿಗ್ನತೆಯಿಂದ ಬ್ರಿಟನ್ ಕಳವಳ

ಲಂಡನ್, ಫೆ. 27: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬ್ರಿಟನ್ ಕಳವಳಗೊಂಡಿದೆ ಎಂದು ಅಲ್ಲಿನ ತೆರೇಸಾ ಮೇ ಸರಕಾರ ಮಂಗಳವಾರ ಹೇಳಿದೆ. ಪ್ರಾದೇಶಿಕ ಸ್ಥಿರತೆಯನ್ನು ಅಪಾಯಕ್ಕೊಡ್ಡುವುದನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅದು ಉಭಯ ದೇಶಗಳನ್ನು ಒತ್ತಾಯಿಸಿದೆ.
‘‘ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾವು ಕಳವಳಗೊಂಡಿದ್ದೇವೆ. ಪ್ರಾದೇಶಿಕ ಸ್ಥಿರತೆಗೆ ಅಪಾಯ ತರುವ ಯಾವುದೇ ಕ್ರಮಕ್ಕೆ ಮುಂದಾದಗಂತೆ ನಾವು ಎರಡೂ ದೇಶಗಳನ್ನು ಒತ್ತಾಯಿಸುತ್ತೇವೆ’’ ಎಂದು ಮಂಗಳವಾರ ವಿದೇಶ ಕಚೇರಿಯ ವಕ್ತಾರರೊಬ್ಬರು ಹೇಳಿದರು.
‘‘ಪುಲ್ವಾಮ ಭಯೋತ್ಪಾದಕ ದಾಳಿಗೆ ಕಾರಣರಾದವರ ಮೇಲೆ ಹೊಣೆ ಹೊರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಅಂತರ್‌ರಾಷ್ಟ್ರೀಯ ಭಾಗೀದಾರರೊಂದಿಗೆ ಬ್ರಿಟನ್ ನಿಕಟ ಸಂಪರ್ಕದಲ್ಲಿದೆ’’ ಎಂದು ಅವರು ನುಡಿದರು.
Next Story





