ಉಡುಪಿ: ನಗರ ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆ ಕಾರ್ಯಾಗಾರ

ಉಡುಪಿ, ಫೆ.27: ಬೀದಿ ಬದಿ ವ್ಯಾಪಾರಸ್ಥರ (ಸಂರಕ್ಷಣೆ, ಜೀವನೋಪಾಯ ಮತ್ತು ನಿಯಂತ್ರಣ) ಕಾಯ್ದೆ 2014ರ ಕುರಿತು ಒಂದು ದಿನದ ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ನಡೆದು ಸುಮಾರು 200 ಮಂದಿ ನಗರ ಬೀದಿ ಬದಿ ವ್ಯಾಪಾರಸ್ಥರು ಇದರಲ್ಲಿ ಭಾಗವಹಿಸಿದ್ದರು.
ಕಾರ್ಯಗಾರವನ್ನು ಉಡುಪಿ ನಗರಸಭಾ ಪೌರಾಯುಕ್ತ ಆನಂದ ಸಿ. ಕಲ್ಲೋಳಿಕರ್ ಉದ್ಘಾಟಿಸಿದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಭಾಸ್ಕರ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ನಗರ ಸ್ಥಳೀಯಸಂಸ್ಥೆಯ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದು, ನಗರ ಬೀದಿಬದಿ ವ್ಯಾಪಾರಸ್ಥರಿಗೆ ಯಾವುದೇ ತೊಂದರೆ ಆದಲ್ಲಿ ನಗರ ಸ್ಥಳೀಯ ಸಂಸ್ಥೆಯಿಂದ ಸಮಸ್ಯೆಯನ್ನು ಬಗೆಹರಿಸಲು ಸಹಕರಿಸುವುದಾಗಿ ತಿಳಿಸಿದರು.
ನಗರ ಬೀದಿಬದಿ ವ್ಯಾಪಾರಸ್ಥರಿಗೆ ಕಾನೂನು ಪ್ರಾಧಿಕಾರದ ವಕೀಲೆ ರೂಪಶ್ರೀ ಹಾಗೂ ಪೋಲೀಸ್ ಇಲಾಖೆಯ ಸಬ್‌ಇನ್ಸ್‌ಪೆಕ್ಟರ್ ಆನಂತ ಪದ್ಮನಾ ಕಾನೂನು ಮಾಹಿತಿ ನೀಡಿದರು. ಆಹಾರ ಸುರಕ್ಷತೆ ನೈರ್ಮಲ್ಯ ಕಾಪಾಡುವ ಬಗ್ಗೆ ಆರೋಗ್ಯ ಪರಿವೀಕ್ಷಣಾಧಿಕಾರಿ ವೆಂಕಟೇಶ್‌ಮತ್ತು ಡೇ-ನಲ್ಮ್ ಯೋಜನೆಯ ಬಗ್ಗೆ ಉಡುಪಿ ನಗರಸಭೆಯ ನಯನ ಮಾಹಿತಿ ನೀಡಿದರು.
ಮಿಷನ್ ವ್ಯವಸ್ಥಾಪಕ ರಾಮಕೃಷ್ಣ ಕಾರ್ಯಕ್ರಮ ಸಂಯೋಜಿಸಿದರು. ಮಿಷನ್ ವ್ಯವಸ್ಥಾಪಕಿ ಗೀತಾ ನಿರೂಪಿಸಿದರು. ನಗರಸಭೆಯ ಸಮುದಾಯ ಸಂಘಟನಾಧಿಕಾರಿನಾರಾಯಣ ಸ್ವಾಗತಿಸಿ, ಗಣೇಶ್ ಕುಂದಾಪುರ ವಂದಿಸಿದರು.







