ಹಿರಿಯಡಕ: ವಿದ್ಯಾರ್ಥಿಗಳಿಂದ ವೀರಯೋಧರಿಗೆ ಶೃದ್ಧಾಂಜಲಿ

ಉಡುಪಿ, ಫೆ.27: ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆದು, ಕಾಲೇಜಿನ ಸಿಬ್ಬಂದಿಗಳು ಮತ್ತು ಎಲ್ಲಾ ವಿದ್ಯಾರ್ಥಿಗಳು ಕಾಶ್ಮೀರದ ಪುಲ್ವಾಮಾದಲ್ಲಿ ಮಡಿದ ವೀರಯೋಧರಿಗೆ ಹಣತೆಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲದೇ ಕಾಲೇಜು ವಾರ್ಷಿಕೋತ್ಸವವನ್ನು ಮೃತ ವೀರಯೋಧರಿಗೆ ಅರ್ಪಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ವೀರಯೋಧರ ತ್ಯಾಗ, ಬಲಿದಾನದ ಸ್ಮರಣೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದರು. ನಿವೃತ್ತ ಬಿಎಸ್‌ಎಫ್ ಯೋಧ ಕುಶ ಸಾಲ್ಯಾನ್ ತಮ್ಮ ಸೇನಾ ಅನುವವನ್ನು ಹಂಚಿಕೊಂಡರು.
ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಬಿ. ಪ್ರಸನ್ನ ಮಾತನಾಡಿ, ಭಾಷೆ, ಸಾಹಿತ್ಯದ ಜ್ಞಾನ ಬದುಕಿಗೆ ಅವಶ್ಯಕವೆಂದು ತಿಳಿಸಿ, ಸಾಹಿತ್ಯದ ಪ್ರೀತಿ ಬೆಳೆಸಿ ಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ಕಾಲೇಜು ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲ ಡಾ. ಪಾದೇಕಲ್ಲು ವಿಷ್ಣು ಟ್ಟ, ಜಿಪಂ ಸದಸ್ಯೆ ಚಂದ್ರಿಕಾ ಸಿ.ಜೆ., ತಾಪಂ ಸದಸ್ಯ ಲಕ್ಷ್ಮೀನಾರಾಯಣ ಪ್ರಭು, ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷೆ ಸವಿತಾ ನಾಯಕ್, ಉಪಾಧ್ಯಕ್ಷ ಹರೀಶ್ ಸಾಲ್ಯಾನ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಮದಾಸ್ ಐತಾಳ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ ಆಚಾರ್ಯ, ಶಿಕ್ಷಣ ತಜ್ಞ ಡಾ. ಎನ್.ಎಸ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಸುಮನಾ ಬಿ. ಕಾರ್ಯಕ್ರಮ ನಿರೂಪಿ ಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸುಜಯಾ ಕೆ.ಎಸ್. ಸ್ವಾಗತಿಸಿ ದರು. ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ಹರ್ಷಿತ್ ಶೆಟ್ಟಿ ಸಂದೇಶ ವಾಚಿಸಿದರು. ಉಪಾಧ್ಯಕ್ಷ ದೀಪಕ್ ಶೆಟ್ಟಿ ವಂದಿಸಿದರು.








