ಅವೈಜ್ಞಾನಿಕ ಮೀನುಗಾರಿಕೆ: ಇಲಾಖಾಧಿಕಾರಿಗಳಿಗೆ ತೀವ್ರ ತರಾಟೆ
ಆಳಸಮುದ್ರ -ನಾಡದೋಣಿ ಮೀನುಗಾರರಿಂದ ಹೋರಾಟದ ಎಚ್ಚರಿಕೆ

ಮಲ್ಪೆ, ಫೆ.27: ನಿರಂತರವಾಗಿ ಕಾನೂನು ಉಲ್ಲಂಘಿಸಿ ಅವೈಜ್ಞಾನಿಕ ಮೀನು ಗಾರಿಕೆ ನಡೆಸುತ್ತಿರುವ ಪರ್ಸಿನ್ ಬೋಟುಗಳ ವಿರುದ್ಧ ಯಾವುದೇ ಕ್ರಮ ಜರಗಿ ಸುತ್ತಿಲ್ಲ ಎಂದು ಆರೋಪಿಸಿ ಆಳಸಮುದ್ರ ಮತ್ತು ನಾಡದೋಣಿ ಮೀನು ಗಾರರು ಬುಧವಾರ ಮಲ್ಪೆ ಮೀನುಗಾರಿಕಾ ಇಲಾಖೆ ಕಚೇರಿಯಲ್ಲಿ ಉಪ ನಿರ್ದೇಶಕರು ಹಾಗೂ ಕರಾವಳಿ ಕಾವಲು ಪಡೆಯ ಅಧಿಕಾರಿಗಳನ್ನು ತೀವ್ರ ವಾಗಿ ತರಾಟೆಗೆ ತೆಗೆದುಕೊಂಡರು.
ಮಲ್ಪೆ ಬಂದರಿನಲ್ಲಿರುವ ಆಳ ಸಮುದ್ರ ಮೀನುಗಾರಿಕಾ ಸಂಘದ ಕಚೇರಿ ಯಲ್ಲಿ ಸಭೆ ನಡೆಸಿದ ಬಳಿಕ ಇಲಾಖೆ ಕಚೇರಿಗೆ ತೆರಳಿದ ಮೀನುಗಾರ ಮುಖಂಡರು, ರಾಜ್ಯ ಮತ್ತು ಕೇಂದ್ರ ಸರಕಾರದ ಆದೇಶ ಹಾಗೂ ಉಚ್ಚ ನ್ಯಾಯಾಲಯದ ಮಧ್ಯಂತರ ತೀರ್ಪುನ್ನು ಉಲ್ಲಂಸಿ ಬೆಳಕಿನ ಮೀನುಗಾರಿಕೆ ನಡೆಸುತ್ತಿರುವ ಪರ್ಸಿನ್ ಬೋಟಿನವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಆಳ ಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಡಿ.ಸುವರ್ಣ ಮಾತನಾಡಿ, ಈ ಅವೈಜ್ಞಾನಿಕ ಮೀನುಗಾರಿಕೆ ವಿರುದ್ದ ನಾವು ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಯಾವುದೇ ಪ್ರಯೋಜನ ಆಗಿಲ್ಲ. ಈ ರೀತಿಯ ಮೀನುಗಾರಿಕೆ ಯಾವುದೇ ಬಂದರಿನಲ್ಲಿ ನಡೆಯುತ್ತಿಲ್ಲ. ನಮ್ಮ ಅಧಿಕಾರಿಗಳು ಅಸಹಾಯಕರಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಜನರೇಟರ್ ಆಳವಡಿಸಿದ ಬೋಟುಗಳನ್ನು ಹಿಡಿದರೂ ಅದರ ವಿರುದ್ಧ ಯಾವುದೇ ಕ್ರಮ ಜರಗಿಸುತ್ತಿಲ್ಲ. ಕರಾವಳಿ ಕಾವಲು ಪಡೆಯ ಬೋಟುಗಳು ಯಾವಾಗಲೂ ದುರಸ್ತಿಯಲ್ಲಿ ಇರುತ್ತದೆ. ಹಾಗಾದರೆ ನಮಗೆ ಇಂತಹ ಇಲಾಖೆ ಗಳು ಬೇಕೆ ಎಂದು ಪ್ರಶ್ನಿಸಿದ ಅವರು, ನಾಳೆಯಿಂದ ಬೆಳಕಿನ ಮೀನುಗಾರಿಕೆ ನಡೆಸುವ ಬೋಟುಗಳು ಸಮುದ್ರಕ್ಕೆ ಇಳಿದರೆ, ಉಗ್ರ ಹೋರಾಟ ನಡೆಸಲಾ ಗುವುದು ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆ ಉಪನಿರ್ದೇಶಕ ಪಾರ್ಶ್ವನಾಥ್, ನಾವು ಇದರ ವಿರುದ್ದ ಕ್ರಮ ಕೈಗೊಳ್ಳುತ್ತಿದ್ದೇವೆ. ಕರಾವಳಿ ಕಾವಲು ಪಡೆಯವರಿಗೂ ಸೂಚನೆ ನೀಡಿದ್ದೇವೆ ಎಂದರು. ಮೀನುಗಾರಿಕೆ ಇಲಾಖೆಯ ಅಧಿಕಾರಿ ಗಳೊಂದಿಗೆ ಸೇರಿ ಬೋಟುಗಳಿಂದ ಜನರೇಟರ್ ತೆಗೆಸುವ ಕೆಲಸ ಮಾಡ ಲಾಗುವುದು ಎಂದು ಮಲ್ಪೆ ಕರಾವಳಿ ಕಾವಲು ಪಡೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಗಜೇಂದ್ರ ಬಿ.ಕೆ. ತಿಳಿಸಿದರು.
ಈ ಸಂದರ್ಭದಲ್ಲಿ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಮೀನುಗಾರ ಮುಖಂಡರಾದ ಲೋಕನಾಥ ಕೋಟ್ಯಾನ್ ವಿಠಲ ಕರ್ಕೇರ, ದಯಾನಂದ ಕುಂದರ್, ದಯಾನಂದ ಕೆ.ಸುವರ್ಣ, ಮಹೇಶ್ ಮೊದಲಾದ ವರು ಉಪಸ್ಥಿತರಿದ್ದರು.
ನಾಲ್ಕು ಬೋಟುಗಳ ಜನರೇಟರ್ ತೆರವು
ಜನರೇಟರ್ ಆಳವಡಿಸಿರುವ 40-45 ಪರ್ಸಿನ್ ಬೋಟುಗಳನ್ನು ಗುರು ತಿಸಲಾಗಿದೆ. ಅದರಲ್ಲಿ 22-23 ಬೋಟುಗಳು ಸದ್ಯ ಬಂದರಿನಲ್ಲಿವೆ. ಇಂದು ನಾಲ್ಕೈದು ಬೋಟುಗಳ ಜನರೇಟರ್‌ಗಳನ್ನು ಇಲಾಖಾಧಿಕಾರಿಗಳು ಹಾಗೂ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ತೆಗೆದಿದ್ದಾರೆ. ಈ ಬೋಟುಗಳಿಗೆ ಡಿಸೇಲ್ ವಿತರಣೆಯನ್ನು ನಿಲ್ಲಿಸಲಾಗಿದ್ದು, ಪರವಾನಿಗೆ ರದ್ದತಿಗೆ ಕ್ರಮ ತೆಗೆದು ಕೊಳ್ಳಲಾಗಿದೆ. ನೊಂದಾವಣಿ ರದ್ದುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಮಲ್ಪೆ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪಾರ್ಶ್ವನಾಥ್ ತಿಳಿಸಿದ್ದಾರೆ.







