ಉಡುಪಿ: ಬೃಹತ್ ತ್ರಿವರ್ಣ ಧ್ವಜ ಪ್ರದರ್ಶಿಸಿ ಸಂಭ್ರಮಾಚರಣೆ

ಉಡುಪಿ, ಫೆ.27: ಭಾರತದ ವಾಯುಸೇನೆಯು ದಾಳಿ ನಡೆಸಿ ಪಾಕಿಸ್ಥಾನದ ಉಗ್ರರನ್ನು ನಾಶಗೊಳಿಸಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಬುಧವಾರ ಉಡುಪಿ ಚಿತ್ತರಂಜನ್ ಸರ್ಕಲ್ ಬಳಿ ವಿಜಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ 20 ಅಡಿ ಉದ್ದ, 14 ಅಡಿ ಅಗಲದ ತ್ರಿವರ್ಣ ಧ್ವಜ ಪ್ರದರ್ಶಿಸಲಾಯಿತು. ಕೃಷ್ಣ ಕ್ಯಾಟ್ರಸ್ ಮಾಲಕ ಶ್ರೀಧರ್ ಭಟ್ ಉಚ್ಚಿಲ ಅವರ ಬಾಣಸಿಗರ ತಂಡ ಸ್ಥಳದಲ್ಲಿಯೇ 3 ಸಾವಿರ ಬಿಸಿ ಬಿಸಿ ಜುಲೇಬಿ ತಯಾರಿಸಿ ಸಾರ್ವಜನಿಕರಿಗೆ ವಿತರಿಸಿತು.
ಕಾರ್ಯಕ್ರಮದಲ್ಲಿ ಯೋಧ ಸುಬ್ರಹ್ಮಣ್ಯ ಉಪಧ್ಯಾಯ, ಮಾಜಿ ಯೋಧ ರಾದ ರಘುಪತಿ ರಾವ್, ಗಣೇಶ್ ರಾವ್, ಸಾಧು ಕುಂದರ್, ಕೃಷ್ಣ ಆಚಾರ್ಯ, ರಮೇಶ್ ಭಂಡಾರಿ, ನವೀನ್ ಕುಮಾರ್, ನಾರಾಯಣ ಭಂಡಾರಿ ಕಪ್ಪೆಟ್ಟು, ಹರಿಣಾಕ್ಷ ಶೆಟ್ಟಿ, ವಿಲ್ಸನ್ ಕರ್ಕೆರ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ಎನ್. ಚಂದ್ರಶೇಖರ್, ರಾಮಕೃಷ್ಣ, ರಾಮರಾವ್, ರೋಜಾರಿಯೊ ಡಿ ಸೋಜ, ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ, ಸುಧಾಕರ, ಡೇವಿಡ್, ಮುಹಮ್ಮದ್ ಉಪಸ್ಥಿತರಿದ್ದರು.





