ವಿವಿಐಪಿ ಕಾಪ್ಟರ್ ಹಗರಣ: ಮಾಫಿ ಸಾಕ್ಷಿದಾರನಾಗಲು ದಿಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ ಸಕ್ಸೇನಾ

ಹೊಸದಿಲ್ಲಿ, ಪೆ. 27: ರೂಪಾಯಿ 3,600 ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಅಗಸ್ಟಾವೆಸ್ಟ್‌ಲ್ಯಾಂಡ್‌ನ ಆರೋಪಿ ರಾಜೀವ್ ಸಕ್ಸೇನಾ, ಪ್ರಕರಣದಲ್ಲಿ ಮಾಫಿ ಸಾಕ್ಷಿದಾರನಾಗಲು ಗುರುವಾರ ದಿಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಮಾಫಿದಾರನಾಗುವ ಸಕ್ಸೇನಾ ಅವರ ಮನವಿ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರು ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದ್ದಾರೆ. ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಸಕ್ಸೇನಾ ಅವರು ದುಬೈ ಮೂಲದ ಎರಡು ಕಂಪೆನಿಗಳಾದ ಯುಎಚ್‌ವೈ ಸಕ್ಸೇನಾ ಹಾಗೂ ಮ್ಯಾಟ್ರಿಕ್ಸ್ ಹೋಲ್ಡಿಂಗ್ಸ್‌ನ ನಿರ್ದೇಶಕ. ಅಗಸ್ಟಾವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಿ ಇಡಿ ದಾಖಲಿಸಿದ ಆರೋಪ ಪಟ್ಟಿ ಸಕ್ಸೇನಾ ಅವರ ಹೆಸರನ್ನು ಒಳಗೊಂಡಿದೆ.
Next Story





