ಉಳ್ಳಾಲ ಎಸ್.ಡಿ.ಪಿ.ಐ ನಿಯೋಗ ಜಿಲ್ಲಾಡಳಿತದೊಂದಿಗೆ ಸಮಾಲೋಚನೆ

ಮಂಗಳೂರು, ಫೆ. 27: ಉಳ್ಳಾಲ ನಗರ ಸಭೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತದೊಂದಿಗೆ ವಿಚಾರ ವಿನಿಮಯ ನಡೆಸಿ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಯಿತು.
ಅಪರ ಜಿಲ್ಲಾಧಿಕಾರಿ, ಜಿಲ್ಲಾ ಯೋಜನಾಧಿಕಾರಿ ಮತ್ತು ಇತರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು, ಕಂಟ್ರಾಕ್ಟರ್ ಗಳ ಬಾಕಿ ಇರುವ ಹಣ ಮಂಜೂರಾತಿ, ಬೀದಿ ದೀಪ ನಿರ್ವಹಣೆ, ಚರಂಡಿ ರಿಪೇರಿ ನೀರು ಸರಬರಾಜು ಮೊದಲಾದ ವಾರ್ಷಿಕ ಟೆಂಡರ್ ಪಡೆದ ಗುತ್ತಿಗೆದಾರರ ಕೆಲಸ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ, ನಗರ ಸಭೆ ಕಟ್ಟಡಗಳ ಬಾಡಿಗೆ ಮಾರುಕಟ್ಟೆ ದರದಂತೆ ವಸೂಲಾಗುತ್ತಿಲ್ಲ, ಮಧ್ಯವರ್ತಿಗಳ ಹಾವಳಿ , ಕಳಪೆ ಕಾಮಗಾರಿಗಳ ಬಗ್ಗೆ ತನಿಖೆ ಮಾಡಬೇಕು, ನಗರೋತ್ಥಾನ ನಿಧಿಯನ್ನು ಎಲ್ಲಾ ವಾರ್ಡ ಗಳಿಗೆ ಮೀಸಲಿಡಬೇಕು, ಅಬ್ಬಕ್ಕ ಉತ್ಸವ ಸಮಿತಿಯಲ್ಲಿ ಉಳ್ಳಾಲದ ಸರಕಾರಿ ಅಧಿಕಾರಿಗಳು ಮತ್ತು ಎಲ್ಲಾ ಪಕ್ಷದ ಚುನಾಯಿತ ಕೌನ್ಸಿಲರಗಳನ್ನು ಸೇರ್ಪಡೆ ಮಾಡ ಬೇಕು ಎಂದು ತಿಳಿಸಲಾಯಿತು.
ಉಳ್ಳಾಲ ಸಮಸ್ಯೆಗಳ ಪರಿಹಾರಕ್ಕೆ ಎಸ್.ಡಿ.ಪಿ.ಐ ನಿಯೋಗ ಸಚಿವ ಯು.ಟಿ. ಖಾದರ್ ಮತ್ತು ಮುಖ್ಯ ಮಂತ್ರಿ ಕುಮಾರ ಸ್ವಾಮಿಯವರನ್ನು ಬೇಟಿಯಾಗಲಿದೆ. ನಿಯೋಗದಲ್ಲಿ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್, ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಎಸ್.ಡಿ.ಪಿ.ಐ. ಉಳ್ಳಾಲ ನಗರ ಸಮಿತಿಯ ಅಧ್ಯಕ್ಷ ಎ.ಆರ್. ಅಬ್ಬಾಸ್, ಉಪಾಧ್ಯಕ್ಷ ನಿಝಾಮುದ್ದೀನ್, ಅಸೆಂಬ್ಲಿ ಸಮಿತಿ ಸದಸ್ಯ ಅಬ್ದುಲ್ ರವೂಫ್ ಹಳೆಕೋಟೆ , ಕೋಟೇಪುರ ಎಸ್.ಡಿ.ಪಿ.ಐ ಮುಖಂಡ ಡಿ.ಎಮ್ ಇಕ್ಬಾಲ್, ಕೌನ್ಸಿಲರ್ ಗಳಾದ ಅಝ್ಗರ್ ಆಲಿ ಮತ್ತು ರಮೀಝ್ ಕೋಡಿ ಉಪಸ್ಥಿತರಿದ್ದರು.









