ಪಾಕ್‌ಗೆ ಮಲಿಕ್ ಸಾರಥ್ಯ: ಆಸೀಸ್ ವಿರುದ್ಧ ಏಕದಿನ ಸರಣಿ
ಲಾಹೋರ್, ಫೆ.27: ಆಸ್ಟ್ರೇಲಿಯ ವಿರುದ್ಧ ಮಾ.22ರಿಂದ ಆರಂಭವಾಗಲಿರುವ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಶುಐಬ್ ಮಲಿಕ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಖಾಯಂ ನಾಯಕ ಸರ್ಫರಾಝ್ ಅಹ್ಮದ್ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ.
ಗಾಯಗೊಂಡಿರುವ ಆಲ್‌ರೌಂಡರ್ ಮುಹಮ್ಮದ್ ಹಫೀಝ್ ಬದಲಿ ಆಟಗಾರನ ಶೋಧದಲ್ಲಿರುವ ಪಾಕ್ ಆಯ್ಕೆ ಸಮಿತಿಯು ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಉಮರ್ ಅಕ್ಮಲ್‌ರನ್ನು ತಂಡಕ್ಕೆ ಬುಲಾವ್ ನೀಡುವ ಸಾಧ್ಯತೆಯಿದೆ.
‘‘ಸರ್ಫರಾಝ್ ಹಾಗೂ ಇತರರಿಗೆ ವಿಶ್ರಾಂತಿ ನೀಡುವುದು ನನ್ನ ಯೋಚನೆಯಾಗಿದೆ. ನಮ್ಮ ಆಟಗಾರರು ಕಳೆದ ಕೆಲವು ಸಮಯದಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಅಷ್ಟೊಂದು ದೀರ್ಘ ಸಮಯ ಆಡಬೇಕೆಂದು ನಾನು ಬಯಸುವುದಿಲ್ಲ. ಹೀಗಾಗಿ ಕಳೆದ 5 ತಿಂಗಳುಗಳಿಂದ ಎಲ್ಲ ಮೂರು ಮಾದರಿ ಕ್ರಿಕೆಟ್‌ನಲ್ಲಿ ಆಡಿ ಸಾಕಷ್ಟು ಒತ್ತಡದಲ್ಲಿರುವ ಆಟಗಾರರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದ್ದೇನೆ’’ಎಂದು ಪಾಕ್ ಆಯ್ಕೆ ಸಮಿತಿ ಮುಖ್ಯಸ್ಥ ಇಂಝಮಾಮ್‌ವುಲ್ ಹಕ್ ಹೇಳಿದ್ದಾರೆ.
Next Story





