ಖೇಲೋ ಇಂಡಿಯಾ ಮೊಬೆಲ್ ಆ್ಯಪ್ ಅನಾವರಣಗೊಳಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ, ಫೆ.27: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಯುವ ಸಂಸತ್ ಪರ್ವದಲ್ಲಿ ಖೇಲೋ ಇಂಡಿಯಾ ಮೊಬೈಲ್ ಆ್ಯಪ್‌ವೊಂದನ್ನು ಅನಾವರಣಗೊಳಿಸಿದರು.
ಭಾರತ ಕ್ರೀಡಾ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲ್ಪಟ್ಟಿರುವ ಆ್ಯಪ್ ಅತ್ಯಂತ ಮುಖ್ಯವಾಗಿ ಯುವಕರಲ್ಲಿ ಕ್ರೀಡೆ ಹಾಗೂ ಫಿಟ್ನೆಸ್ ವಿಚಾರದಲ್ಲಿ ಜಾಗೃತಿ ಮೂಡಿಸಲು ನೆರವಾಗಲಿದೆ. ಭಾರತದಲ್ಲಿ ಕ್ರೀಡಾ ಪರಿಸರವ್ಯವಸ್ಥೆ ಬೆಳವಣಿಗೆಗೆ ಹಾಗೂ ಮುಂಬರುವ ದಿನಗಳಲ್ಲಿ ದೇಶವನ್ನು ಜಾಗತಿಕ ಕ್ರೀಡಾ ಮಹಾಶಕ್ತಿಯಾಗಿ ಪರಿವರ್ತಿಸುವತ್ತ ಒತ್ತು ನೀಡಲಾಗುತ್ತದೆ.
ಆ್ಯಪ್‌ನಲ್ಲಿ ಮೂರು ವೈಶಿಷ್ಟಗಳಿದ್ದು, ಇವು ದೇಶಾದ್ಯಂತ ಮಕ್ಕಳಲ್ಲಿ ಸಾಮರ್ಥ್ಯವುಳ್ಳ ಚಾಂಪಿಯನ್ ಗುರುತಿಸಲು ನೆರವಾಗಲಿದೆ. ಕಾರ್ಯಕ್ರಮದಲ್ಲಿ ಕ್ರೀಡಾ ಯುವಜನ ವ್ಯವಹಾರ ಸಚಿವ ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿದ್ದರು. ಆ್ಯಪ್‌ನ್ನು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ರಚಿಸಲಾಗಿದೆ.
Next Story





