ಕಂಪೆನಿ ಸೆಕ್ರೆಟರಿ ಪರೀಕ್ಷೆ : ಪ್ರಾಂಜಲ್ ಚೇಚಾನಿಗೆ ರಾಷ್ಟ್ರ ಮಟ್ಟದಲ್ಲಿ 17ನೇ ಸ್ಥಾನ

ಔರಂಗಾಬಾದ್ , ಫೆ. 28: ದಿ ಇನ್ಸ್ಟಿ ಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ (ICSI) ಮಂಗಳವಾರ ಈ ಸಾಲಿನ ಕಂಪೆನಿ ಸೆಕ್ರೆಟರಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದ್ದು ಔರಂಗಾಬಾದ್ ನ ಪ್ರಾಂಜಲ್ ಚೇಚಾನಿ ಅಖಿಲ ಭಾರತ 17ನೇ ರಾಂಕ್ ಪಡೆದಿದ್ದಾರೆ.
ಪ್ರಾಂಜಲ್ ಅವರು ಔರಂಗಾಬಾದ್ ನ ಉದ್ಯಮಿ, ಚಾರ್ಟರ್ಡ್ ಅಕೌಂಟೆಂಟ್ ಮನೀಶ್ ಕುಮಾರ್ ಚೇಚಾನಿ ಮತ್ತು ಮಧುಲಿಕಾ ಚೇಚಾನಿ ಅವರ ಪುತ್ರಿ. ಈಕೆ ಮೊದಲ ಯತ್ನದಲ್ಲೇ ಈ ಯಶಸ್ಸು ಗಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಪರೀಕ್ಷೆ ನಡೆದಿತ್ತು. ಪ್ರಾಂಜಲ್ ಔರಂಗಾಬಾದ್ ಸೆಂಟರ್ ನಿಂದ ಪರೀಕ್ಷೆ ಎದುರಿಸಿದ್ದರು.
Next Story





