ಪಯನೀರ್ ಪಬ್ಲಿಕ್ ಸ್ಕೂಲ್ ಜಾಲ್ಸೂರ್: ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಜಾಲ್ಸೂರ್, ಫೆ. 28 : ಪಯನೀರ್ ಪಬ್ಲಿಕ್ ಸ್ಕೂಲ್ ಜಾಲ್ಸೂರ್ ನಲ್ಲಿ ವಿಜ್ಞಾನ ರಾಷ್ಟ್ರೀಯ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಅಬ್ದುಲ್ ರಝಾಕ್ ಕಾರ್ಯಕ್ರಮ ಉದ್ಘಾಟಿಸಿ, ವಿಜ್ಞಾನ ಲೋಕಕ್ಕೆ ಸರ್ ಸಿ ವಿ ರಾಮನ್ ಅವರ ಕೊಡುಗೆಯ ಬಗ್ಗೆ ಮಾಹಿತಿ ನೀಡಿದರು.
ನಂತರ ಶಾಲಾ ವಿದ್ಯಾರ್ಥಿಗಳು ವಿವಿಧ ರೀತಿಯ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಶಾಲಾ ಮುಖ್ಯ ಶಿಕ್ಷಕಿ ಜಾಹ್ನವಿ ಕಾರ್ಯಕ್ರಮ ನಡೆಸಿಕೊಟ್ಟರು. ಇತರ ಶಿಕ್ಷಕಿಯರು ಸಹಕರಿಸಿದರು.

Next Story





