ಸಾಲಮನ್ನಾ ಯೋಜನೆಯಡಿ 4,163 ಕೋಟಿ ರೂ.ಬಿಡುಗಡೆ: ಮನೀಶ್ ಮೌದ್ಗಿಲ್
ಬೆಂಗಳೂರು, ಫೆ.28: ರೈತರ ಸಾಲ ಮನ್ನಾ ಯೋಜನೆಯಡಿಯಲ್ಲಿ ವಾಣಿಜ್ಯ ಮತ್ತು ಸಹಕಾರ ಬ್ಯಾಂಕುಗಳು ಸೇರಿಸಿ 4,163 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಾಲ ಮನ್ನಾ ಯೋಜನೆಯ ನೋಡಲ್ ಅಧಿಕಾರಿ ಮನೀಶ್ ವೌದ್ಗಿಲ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಣಿಜ್ಯ ಬ್ಯಾಂಕುಗಳಲ್ಲಿ 17 ಲಕ್ಷ ರೈತರು ಹಾಗೂ ಸಹಕಾರ ಬ್ಯಾಂಕುಗಳಲ್ಲಿ 18.50 ಲಕ್ಷ ರೈತರು ಸಾಲ ಪಡೆದಿದ್ದಾರೆ. ಶೇ.90ರಷ್ಟು ಜನ ರೈತರು ಸಾಲಮನ್ನಾಕ್ಕಾಗಿ ದಾಖಲೆ ಸಲ್ಲಿಸಿದ್ದಾರೆ. ಇನ್ನೂ ಶೇ.10ರಷ್ಟು ರೈತರು ಸೂಕ್ತ ದಾಖಲಾತಿಗಳನ್ನು ಕೊಟ್ಟಿಲ್ಲ ಎಂದರು.
ರೈತರು ಅಗತ್ಯವಿರುವ ದಾಖಲಾತಿಗಳನ್ನು ನೀಡುತ್ತಿದ್ದಂತೆ ಸಾಲ ಮನ್ನಾದ ಪ್ರಕ್ರಿಯೆ ಮುಂದುವರೆಯುತ್ತದೆ. ಪ್ರತಿ ವಾರ ಸಾಲ ಮನ್ನಾ ಯೋಜನೆಯ ಹಣ ಬಿಡುಗಡೆ ಯಾಗುತ್ತಿದೆ ಎಂದು ಮನೀಶ್ ಮೌದ್ಗಿಲ್ ಮಾಹಿತಿ ನೀಡಿದರು.
Next Story





