ಟ್ವೆಂಟಿ-20 ಗರಿಷ್ಠ ರನ್ ಸ್ಕೋರರ್ ಪಟ್ಟಿ : ಅಗ್ರ-3ರಲ್ಲಿ ಕೊಹ್ಲಿ
ಬೆಂಗಳೂರು,ಫೆ.28: ಭಾರತ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯ ವಿರುದ್ಧದ ಟಿ-20 ಸರಣಿಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ವಿಫಲರಾದರೂ ವೈಯಕ್ತಿಕವಾಗಿ ದಾಖಲೆ ನಿರ್ಮಿಸಿದರು. ಕೊಹ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ದಾಂಡಿಗರ ಪಟ್ಟಿಯಲ್ಲಿ ಮೂರನೇ ಸ್ಥಾನ ತಲುಪಿದರು. ಬುಧವಾರ ಆಸೀಸ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ 38 ಎಸೆತಗಳಲ್ಲಿ 72 ರನ್ ಗಳಿಸಿದ ಕೊಹ್ಲಿ 67 ಪಂದ್ಯಗಳಲ್ಲಿ ಒಟ್ಟು 2,263 ರನ್ ಗಳಿಸಿದರು.
ಈ ಮೂಲಕ 111 ಪಂದ್ಯಗಳಲ್ಲಿ 2,263 ರನ್ ಗಳಿಸಿದ ಪಾಕ್ ದಾಂಡಿಗ ಶುಐಬ್ ಮಲಿಕ್ ಗರಿಷ್ಠ ಟಿ-20 ರನ್ ದಾಖಲೆಯನ್ನು ಸರಿಗಟ್ಟಿದರು. ಕೊಹ್ಲಿ ಹಾಗೂ ಮಲಿಕ್‌ಗಿಂತ ಮಾರ್ಟಿನ್ ಗಪ್ಟಿಲ್(74 ಪಂದ್ಯಗಳು, 2,272 ರನ್) ಹಾಗೂ ರೋಹಿತ್ ಶರ್ಮಾ(94 ಪಂದ್ಯಗಳು, 2,331 ರನ್)ಮುಂದಿದ್ದಾರೆ. ಕೊಹ್ಲಿ ಅವರು ಗಪ್ಟಿಲ್‌ಗಿಂತ 9 ರನ್ ಹಾಗೂ ರೋಹಿತ್‌ಗಿಂತ 68 ರನ್ ಹಿಂದಿದ್ದಾರೆ.
Next Story





