ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಬಾಕ್ಸರ್ ಜೇಮ್ಸ್ ಡಿಗಾಲೆ ನಿವೃತ್ತಿ
ಲಂಡನ್, ಫೆ.28: ಮಾಜಿ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಜೇಮ್ಸ್ ಡಿಗಾಲೆ ಗುರುವಾರ ಬಾಕ್ಸಿಂಗ್‌ನಿಂದ ನಿವೃತ್ತಿಯಾಗಿದ್ದಾರೆ. ವೃತ್ತಿಪರ ಬಾಕ್ಸಿಂಗ್‌ಗೆ ಕಾಲಿಟ್ಟು ಹತ್ತು ವರ್ಷ ಗತಿಸಿದ ದಿನವೇ ಕ್ರಿಸ್ ಯುಬ್ಯಾಂಕ್ ವಿರುದ್ಧ ಆಡಿದ ಪಂದ್ಯವನ್ನು ಸೋತ ಬೆನ್ನಿಗೇ ಜೇಮ್ಸ್ ನಿವೃತ್ತಿ ಘೋಷಿಸಿದರು.
33ರ ಹರೆಯದ ಜೇಮ್ಸ್ ವೃತ್ತಿಪರ ವಿಶ್ವ ಪ್ರಶಸ್ತಿಯನ್ನು ಜಯಿಸಿದ ಮೊದಲ ಬ್ರಿಟನ್ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2008ರಲ್ಲಿ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದರು.
‘‘ಇನ್ನು ಮುಂದೆ ಬಾಕ್ಸಿಂಗ್‌ನಲ್ಲಿ ಹೋರಾಡುವುದಿಲ್ಲ ಎಂದು ತಿಳಿಸಲು ಬೇಸರವಾಗುತ್ತದೆ. ನಾನು ಮನುಷ್ಯ, ನನಗೆ ಮನಸ್ಸು ಹಾಗೂ ದೇಹಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಈ ಎಲ್ಲ ಅಂಶಗಳು ರಿಂಗ್‌ನಲ್ಲಿ ನನ್ನ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿವೆ’’ ಎಂದು 29 ವೃತ್ತಿಪರ ಹೋರಾಟದಲ್ಲಿ 25ರಲ್ಲಿ ಜಯ, 3ರಲ್ಲಿ ಸೋಲು ಹಾಗೂ ಒಂದರಲ್ಲಿ ಡ್ರಾ ಸಾಧಿಸಿರುವ ಜೇಮ್ಸ್ ಹೇಳಿದ್ದಾರೆ.
Next Story





