ಅಭಿನಂದನ್ ತೋರಿದ ಧೈರ್ಯ ಮೆಚ್ಚುವಂತದ್ದು: ಪೇಜಾವರಶ್ರೀ

ಉಡುಪಿ, ಮಾ. 1: ಅಭಿನಂದನ್ ತೋರಿದ ಧೈರ್ಯ ಮೆಚ್ಚುವಂತದ್ದು, ಶತ್ರುಗಳ ದೇಶದಲ್ಲಿ ಆತ ವರ್ತಿಸಿದ ರೀತಿ ದೇಶದ ಗೌರವ ಹೆಚ್ಚಿಸಿದೆ. ಅಭಿನಂದನ್ ಗೆ ಸಾವಿರ ಸಾವಿರ ಅಭಿನಂದನೆಗಳು. ಜೇಬಲ್ಲಿದ್ದ ಕಾಗದ ಪತ್ರ ನುಂಗಿ ದೇಶದ ಕಾಳಜಿ ತೋರಿದ್ದಾರೆ ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.
ಉಡುಪಿಯಲ್ಲಿ ಈ ಬಗ್ಗೆ ಹೇಳಿಕೆ ನೀಡಿ ಮಾತನಾಡಿದ ಅವರು, ಪಾಕಿಸ್ತಾನದ ಜೊತೆ ಯುದ್ಧ ಬೇಡ. ಯುದ್ಧದಿಂದ ಸಾವಿರಾರು ಸಾವು ನೋವುಗಳು ಸಂಭವಿಸುತ್ತದೆ. ಯುದ್ಧದಿಂದ ನಮ್ಮ ಸೈನಿಕರ ಸಾವಾಗುತ್ತದೆ. ಆತ್ಮಾಭಿಮಾನಕ್ಕೆ ಚ್ಯುತಿಬಾರದ ರೀತಿಯಲ್ಲಿ ಶಾಂತಿ ಸ್ಥಾಪನೆಯಾಗಲಿ. ಮೋದಿಗೆ ನನ್ನ ಅಭಿನಂದನೆ. ಅಭಿವೃದ್ಧಿ ಮತ್ತು ಧೈರ್ಯ, ದಿಟ್ಟತನವನ್ನು ನಾನು ಮೆಚ್ಚುತ್ತೇನೆ. ಮೋದಿ ಸೂಕ್ತ ಸಮಯದಲ್ಲಿ ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ 22 ಸೀಟು ಹೇಳಿಕೆ ವಿಚಾರ
ಇದೊಂದು ಚಿಕ್ಕ ವಿಚಾರ, ದೊಡ್ಡ ವಿಷಯವಲ್ಲ. ಇಂದಿರಾಗಾಂಧಿ ಆಳ್ವಿಕೆ ಸಂದರ್ಭ ಯುದ್ಧ ಆಗಿದೆ. ಆಗ ಕಾಂಗ್ರೆಸ್ ಗೆ ಉಪಯೋಗವಾಗ್ತದೆ ಅಂತ ಎಲ್ಲರು ಹೇಳಿಕೊಂಡಿದ್ದರು. ಬಿಎಸ್ ವೈ ಹೇಳಿಕೆಯನ್ನು ದೊಡ್ಡ ವಿಷಯ ಮಾಡಬೇಕಾಗಿಲ್ಲ ಎಂದು ಹೇಳಿದರು.
ಉಗ್ರರ ಸಂಹಾರ ಆಗಬೇಕು. ಅಮಾಯಕರ ಹತ್ಯೆ ಆಗಬಾರದು, ಉಗ್ರರನ್ನು ಹುಡುಕಿ ಕೊಲ್ಲಬೇಕು. ಸೈನಿಕರ ಸರ್ಜಿಕಲ್ ಸ್ಟ್ರೈಕ್ ಗೆ ಅಭಿನಂದಿಸುತ್ತೇನೆ. ದೇಶದ ಬುದ್ಧಿಜೀವಿಗಳ ಬಗ್ಗೆ ತಿರಸ್ಕಾರ ಉಂಟಾಗಿದೆ. ಇಂತಹ ಸಂದರ್ಭದಲ್ಲೂ ಅವರಿಗೆ ದೇಶಾಭಿಮಾನ ಇಲ್ಲ. ಬುದ್ಧಿಜೀವಿಗಳಿಗೆ ಒಳ್ಳೆ ಬುದ್ಧಿ ಕೊಡಬೇಕು ಎಂದು ದೇವರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ ಎಂದು ಪೇಜಾವರ ಶ್ರೀ ಹೇಳಿಕೆ ನೀಡಿದರು.







