ಪುತ್ರನನ್ನು ಬರಮಾಡಿಕೊಳ್ಳಲು ಹೊರಟ ಅಭಿನಂದನ್ ಹೆತ್ತವರಿಗೆ ಸಿಕ್ಕ ಸ್ವಾಗತ ಹೇಗಿತ್ತು ಗೊತ್ತಾ?
ವಿಡಿಯೋ ನೋಡಿ

ಹೊಸದಿಲ್ಲಿ, ಮಾ.1: ಪಾಕಿಸ್ತಾನದ ವಶದಲ್ಲಿರುವ ಹಾಗೂ ಇಂದು ಯಾವುದೇ ಕ್ಷಣದಲ್ಲಿ ಬಿಡುಗಡೆಗೊಳ್ಳಲಿರುವ ಭಾರತೀಯ ವಾಯುಪಡೆಯ ಪೈಲಟ್, ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಎದುರುಗೊಳ್ಳಲು ಅವರ ಹೆತ್ತವರು ಚೆನ್ನೈನಿಂದ-ದಿಲ್ಲಿಗೆ ವಿಮಾನದಲ್ಲಿ ತೆರಳಿದ ಸಂದರ್ಭ ಸಹ ಪ್ರಯಾಣಿಕರು ಅವರನ್ನು ಆತ್ಮೀಯದಿಂದ ಬರಮಾಡಿಕೊಂಡರಲ್ಲದೆ, ಚಪ್ಪಾಳೆ ಹೊಡೆದು ಹುರಿದುಂಬಿಸಿದರು. ಅವರು ತಮ್ಮ ಸೀಟುಗಳತ್ತ ನಡೆಯುತ್ತಿದ್ದಂತೆಯೇ ಅವರ ಫೋಟೋಗಳನ್ನೂ ಕೆಲವರು ಕ್ಲಿಕ್ಕಿಸಿದರು.
ಅಭಿನಂದನ್ ಅವರನ್ನು ಇಂದು ಬಿಡುಗಡೆಗೊಳಿಸಲಾಗುವುದು ಎಂದು ಗುರುವಾರ ಪಾಕಿಸ್ತಾನ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅವರ ಹೆತ್ತವರು ದಿಲ್ಲಿಗೆ ಹೊರಟಿದ್ದರು. ಅವರಿದ್ದ ವಿಮಾನ ರಾಜಧಾನಿಯನ್ನು ಮಧ್ಯರಾತ್ರಿ ಕಳೆದ ನಂತರ ತಲುಪಿತ್ತು. ನಂತರ ಅವರು ಅಲ್ಲಿಂದ ಅಮೃತಸರ್ ಗೆ ತೆರಳಿದ್ದು ಇಂದು ಅಪರಾಹ್ನ 2 ಗಂಟೆಗೆ ಅಭಿನಂದನ್ ಬಿಡುಗಡೆಗೊಳ್ಳುವ ವೇಳೆ ಅವರು ವಾಘಾ ಗಡಿಯಲ್ಲಿರಲಿದ್ದಾರೆ.
ಅಭಿನಂದನ್ ತಂದೆ ನಿವೃತ್ತ ಏರ್ ಮಾರ್ಷಲ್ ಎಸ್ ವರ್ತಮಾನ್ ಉನ್ನತ ಹಾಗೂ ಪ್ರಶಸ್ತಿ ವಿಜೇತ ಅಧಿಕಾರಿಯಾಗಿದ್ದರೆ, ಅವರ ತಾಯಿ ಡಾ.ಶೋಭಾ ವರ್ತಮಾನ್ ಅವರು ವೈದ್ಯೆಯಾಗಿದ್ದಾರೆ.





