ಬೈಂದೂರು ಸಂಸದರ ಕಚೇರಿ ಮುಂದೆ ಕಾರ್ಮಿಕರ ಧರಣಿ

ಬೈಂದೂರು, ಮಾ.1: ಕಟ್ಟಡ ಕಾರ್ಮಿಕರ ಕಾನೂನು 1996 ಉಳಿಸಿ ಕಟ್ಟಡ ಕಾರ್ಮಿಕ ಮಂಡಳಿ ಹಾಗೂ ಕಾರ್ಮಿಕರ ಬದುಕು ರಕ್ಷಿಸಿ ದೇಶವ್ಯಾಪಿ ಪ್ರಚಾರಾಂದೋಲನ ಪ್ರಯುಕ್ತ ಉಡುಪಿ ಜಿಲ್ಲಾ ಹಾಗೂ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಗುರುವಾರ ಬೈಂದೂರು ಸಂಸದರ ಕಛೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಸಿಐಟಿಯು ತಾಲೂಕು ಕಾರ್ಯದರ್ಶಿ ವೆಂಕಟೇಶ ಕೋಣಿ ಸಭೆಯನ್ನು ದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬೈಂದೂರು ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ಪ್ರಧಾನ ಕಾರ್ಯದರ್ಶಿ ಗಣೇಶ್ ತೊಂಡೆಮಕ್ಕಿ, ಕೋಶಾಧಿಕಾರಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಉಪಾಧ್ಯಕ್ಷರಾದ ಗಣೇಶ್ ಮೊಗವೀರ, ಮಾಧವ ದೇವಾಡಿಗ, ಶ್ರೀಧರ, ಉದಯ ಮೊಗೇರಿ, ವಿಜಯ, ಮಂಜು ಪಡುವರಿ, ಅಮ್ಮಯ್ಯ ಉಪಸ್ಥಿತರಿದ್ದರು.
Next Story





