ಕಲಾ ಚಟುವಟಿಕೆಗಳಿಂದ ಬೆಳವಣಿಗೆ ಸಾಧ್ಯ: ಗುರುಮೂರ್ತಿ

ಉಡುಪಿ, ಮಾ.1: ನಾಟಕ, ಯಕ್ಷಗಾನಗಳೆಲ್ಲ ಸಮೂಹ ಭಾವನೆಗಳನ್ನು ಮೂಡಿಸುವಂತದ್ದು. ಅದು ಆಶೋತ್ತರಗಳ ಈಡೇರಿಕೆಗೆ ಶ್ರದ್ಧೆಯ ಸಹಭಾಗಿತ್ವ ಒದಗಿಸುತ್ತದೆ. ಕಲೆಯ ಸೆಳೆತವೆ ಉನ್ನತಿಯ ಪರವಾಗಿರುವಂತದ್ದು. ಅದು ಬೆಳೆಯಲು ಮತ್ತು ಬೆಳೆಸಲು ಕಾರಣವಾಗುತ್ತದೆ ಎಂದು ರಂಗಕರ್ಮಿ ಗುರು ಮೂರ್ತಿ ನೀನಾಸಂ ತಿಳಿಸಿದ್ದಾರೆ.
ಉಡುಪಿ ಭಜಂಗ ಪಾರ್ಕಿನ ಬಯಲು ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸಂಸ್ಕೃತಿ ನಿರ್ದೇಶನಾಲಯ ನವದೆಹಲಿ ಇದರ ಸಹಯೋಗದೊಂದಿಗೆ ಸುಮನಸಾ ಕೊಡವೂರು ಆಯೋಜಿಸಲಾದ ರಂಗಹಬ್ಬ 7ರ ನಾಲ್ಕನೆ ದಿನವಾದ ಗುರುವಾರದ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಗುರು ಹಾವಂಜೆ ಮಂಜುನಾಥ್ ರಾವ್ ಇವರನ್ನು ರಂಗ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಪೌರಾಯುಕ್ತ ಆನಂದ ಕಲ್ಲೋಳಿಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕೊಡವೂರು ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಜರ್ನಾದನ ಕೊಡವೂರು, ಉದ್ಯಮಿಗಳಾದ ಮಹಾಬಲ ಸಾಲ್ಯಾನ್, ಸುಮನಸಾದ ಗೌರವಾಧ್ಯಕ್ಷ ಎಂ.ಎಸ್.ಭಟ್ ಉಪಸ್ಥಿತರಿದ್ದರು.
ಕೋಶಾಧಿಕಾರಿ ಚಂದ್ರಕಾಂತ್ ಕುಂದರ್ ಸ್ವಾಗತಿಸಿದರು. ನೂತನ್ ಕುಮಾರ್ ಮಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿ ದರು. ಬಳಿಕ ಸುಮನಸಾ ಕೊಡವೂರು ತಂಡದಿಂದ ಪಂಚವಟಿ ಯಕ್ಷನಾಟಕ ಪ್ರದರ್ಶನ ಗೊಂಡಿತು.







