ಪೊಯ್ಯತ್ತಬೈಲ್ ದರ್ಸ್ 50ನೇ ಸಂಭ್ರಮ-ಅಲಿಕುಂಞಿ ಮುಸ್ಲಿಯಾರ್‌ಗೆ ಸನ್ಮಾನ

ಮಂಜೇಶ್ವರ, ಮಾ.1: ಇಲ್ಲಿಗೆ ಸಮೀಪದ ಪೊಯ್ಯತ್ತಬೈಲಿನಲ್ಲಿ 1969ರಲ್ಲಿ ಊರವರ ಸಹಾಯದೊಂದಿಗೆ ತಾಜುಶರೀಹಃ ಅಲಿಕುಂಞಿ ಮುಸ್ಲಿಯಾರ್‌ರ ಮುತುವರ್ಜಿಯಲ್ಲಿ ಸ್ಥಾಪಿತವಾದ ಪೊಯ್ಯತ್ತಬೈಲ್ ದರ್ಸ್ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗೋಲ್ಡನ್ ಜ್ಯುಬಿಲಿ ಸಮ್ಮೇಳನ ಹಾಗೂ ಕೇರಳ ಜಂಯಿಯ್ಯತುಲ್ ಉಲಮಾ ಉಪಾಧ್ಯಕ್ಷ ಮತ್ತು ಪೊಯ್ಯತ್ತಬೈಲ್ ಖಾಝಿಯೂ ಆದ ತಾಜುಶರೀಹ: ಅಲಿಕುಂಞಿ ಮುಸ್ಲಿಯಾರ್‌ರನ್ನು ಸನ್ಮಾನಿಸುವ ಕಾರ್ಯಕ್ರಮ ಗುರುವಾರ ಜರುಗಿತು.
ಗುರುವಾಯನಕೆರೆಯ ಸಾದಾತ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು.ಹಾಮಿದ್ ಕೋಯಮ್ಮ ತಂಙಳ್ ಮಾಟ್ಟೂಲ್ ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.
ಜಮಾಅತ್ ಅಧ್ಯಕ್ಷ ಡಿಎಂಕೆ ಮುಹಮ್ಮದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಚಿವ ಯುಟಿ ಖಾದರ್, ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಇಬ್ರಾಹೀಂ ಬಾತಿಷ್ ತಂಙಳ್ ಆನೆಕಲ್ಲು, ಮುನೀರುಲ್ ಅಹ್ದಲ್ ತಂಙಳ್ ಮುಹಿಮ್ಮಾತ್, ಶಂಶುದ್ದೀನ್ ತಂಙಳ್ ಗಾಂಧಿನಗರ, ಬದ್ರುದ್ದೀನ್ ತಂಙಳ್ ಗಾಂಧಿ ನಗರ, ಅಬ್ದುಲ್ಲ ಮುಸ್ಲಿಯಾರ್ ಬೆಳ್ಳಿಪ್ಪಾಡಿ ಮಾತನಾಡಿದರು.
ಈ ಸಂದರ್ಭ ಸನದುದಾನ ಪ್ರದಾನ ಮಾಡಲಾಯಿತು. ಅಲ್ಲದೆ ಪೊಯ್ಯತ್ತಬೈಲ್ ಮದ್ರಸ ಹಾಗೂ ಮಸೀದಿಗಾಗಿ ಸೇವೆಗೈದವರನ್ನು ಗೌರವಿಸಲಾಯಿತು.
ಮುಹ್ಯಿಸುನ್ನ ಪೊನ್ನಳ ಅಬ್ದುಲ್ ಖಾದರ್ ಮುಸ್ಲಿಯಾರ್ ಮುಖ್ಯಭಾಷಣಗೈದರು.
ಪೊಯ್ಯತ್ತಬೈಲ್ ಮಣವಾಠಿ ಬೀಬಿಯ ಉರೂಸ್‌ನ ಸಮಾರೋಪವು ಮಾ.2ರಂದು ಮುಕ್ತಾಯಗೊಳ್ಳಲಿದೆ. ಮಾ.3ರಂದು ಮೌಲಿದ್ ಪಾರಾಯಣ ಹಾಗೂ ಅನ್ನದಾನ ನಡೆಯಲಿದ್ದು, ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ವೌಲಿದ್‌ಗೆ ನೇತೃತ್ವ ನೀಡಲಿದ್ದಾರೆ. ಅಬ್ದುಲ್ ಕರೀಂ ಡಿ.ಕೆ. ವಂದಿಸಿದರು.







