ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವ್ಯಕ್ತಿ ನಾಪತ್ತೆ

ಮಂಗಳೂರು, ಮಾ.1: ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವ್ಯಕ್ತಿ ಮನೆಗೆ ಬಾರದೇ ನಾಪತ್ತೆಯಾಗಿದ್ದು, ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾವುಲ್ ವಿನ್ಸೆಂಟ್ ಪಿಂಟೋ (42) ನಾಪತ್ತೆಯಾದವರು. ಇವರು ಫೆ. 24ರಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಿದ್ದು, ಬಳಿಕ ಮನೆಗೆ ವಾಪಸಾಗಿಲ್ಲ. ಈ ಬಗ್ಗೆ ನಗರದಲ್ಲಿ ಹುಡುಕಾಡಿದರೂ ವ್ಯಕ್ತಿ ಪತ್ತೆಯಾಗಿಲ್ಲ.
ಚಹರೆ: ನಾಪತ್ತೆಯಾದ ಪಿಂಟೋ ಅವರು 6 ಅಡಿ 4 ಇಂಚು, ದುಂಡು ಮುಖ, ಗೋಧಿ ಮೈ ಬಣ್ಣ, ಕಪ್ಪು ತಲೆ ಕೂದಲು, ಕೆಂಪು ಬಣ್ಣದ ಗೆರೆಗಳಿರುವ ಉದ್ದ ತೋಳಿನ ಬಿಳಿ ಟೀ ಶರ್ಟ್, ಕಪ್ಪು ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈ ಚಹರೆಯ ವ್ಯಕ್ತಿ ಪತ್ತೆಯಾದಲ್ಲಿ ಬಜ್ಪೆ ಪೊಲೀಸ್ ಠಾಣೆ(0824- 2220531)ಗೆ ಮಾಹಿತಿ ನೀಡಲು ಪ್ರಕಟನೆ ತಿಳಿಸಿದೆ.
Next Story





