ವಿಶ್ವವನ್ಯಜೀವಿ ದಿನದ ಅಂಗವಾಗಿ ನಟ ದರ್ಶನ್ ಸೆರೆಹಿಡಿದ ಛಾಯಾಚಿತ್ರಗಳ ಪ್ರದರ್ಶನ

ಮೈಸೂರು,ಮಾ.1: ಇದೇ ತಿಂಗಳ ಮಾ.3 ರಂದು ವಿಶ್ವವನ್ಯಜೀವಿ ದಿನದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಮೂರು ದಿನಗಳ ಕಾಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ “ಲೈಫ್ ಆನ್ ದಿ ವೈಲ್ಡ್ ಸೈಡ್” ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ನಟ ದರ್ಶನ್ ಸೆರೆ ಹಿಡಿದ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನವನ್ನು ಅರಣ್ಯ ಇಲಾಖೆಯ ಸಹಯೋಗದಲ್ಲಿ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ನಟ ದರ್ಶನ್ ಹಾಗೂ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜು ಚಾಲನೆ ನೀಡಿದರು. ಪ್ರದರ್ಶನದಲ್ಲಿ ದರ್ಶನ್ ಕಾಡಿನಲ್ಲಿ ಸೆರೆ ಹಿಡಿದ 75 ಆಯ್ದ ಛಾಯಾಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.
ವನ್ಯಜೀವಿ ಸಂರಕ್ಷಣಾ ನಿಧಿಗೆ ಹಣ ಸಂಗ್ರಹಿಸಲು ದರ್ಶನ್ ಪ್ರದರ್ಶನ ಏರ್ಪಡಿಸಿದ್ದು, ತಮ್ಮ ಚಿತ್ರಗಳ ಪ್ರದರ್ಶನದ ಜೊತೆಗೆ ಮಾರಾಟವನ್ನು ಆಯೋಜನೆ ಮಾಡಿದ್ದಾರೆ. ಪ್ರತಿ ಚಿತ್ರಕ್ಕೆ 2000 ಸಾವಿರ ರೂ. ಬೆಲೆ ನಿಗದಿಪಡಿಸಲಾಗಿದೆ.
ಈ ಸಂದರ್ಭ ಅರಣ್ಯಾಧಿಕಾರಿಗಳಾದ ಏಡುಕುಂಡಲು, ಮೃಗಾಲಯ ಸಿಇಓ ಅಜಿತ್ ಕುಲಕರ್ಣಿ, ಡಿಎಫ್‍ಓಗಳಾದ ಸಿದ್ದರಾಮಪ್ಪ, ಪ್ರಶಾಂತ್ ಸೇರಿ ಹಲವರು ಉಪಸ್ಥಿತರಿದ್ದರು.





