ಡಾಕ್ಟರ್ ಅಬ್ದುಲ್ ಬಶೀರ್ ಗೆ ಸರ್ವೋತ್ತಮ ವೈದ್ಯ ರತ್ನ ಪ್ರಶಸ್ತಿ

ವಿಟ್ಲ, ಮಾ. 1: ಇಲ್ಲಿಗೆ ಸಮೀಪದ ಕಂಬಳಬೆಟ್ಟು ನಿವಾಸಿ ಡಾ. ಅಬ್ದುಲ್ ಬಶೀರ್ ವಿ.ಕೆ.ಅವರಿಗೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸರ್ವೋತ್ತಮ ವೈದ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಬ್ದುಲ್ ಬಶೀರ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಾಮಾಜಿಕ ಬದ್ಧತೆಯ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಹಾಸನದ ಜನಪ್ರಿಯ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಕಾರ್ಯತತ್ಪರರಾಗಿ ಯಶಸ್ಸು ಕಂಡಿದ್ದರು. ಇವರ ಅನುಪಮ ಸೇವೆಯನ್ನು ಗುರುತಿಸಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಹಾಸನಾಂಭ ಕಲಾ ಕ್ಷೇತ್ರದಲ್ಲಿ ಪೆ. 28 ರಂದು ನಡೆದ 17 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ "ಸರ್ವೋತ್ತಮ ವೈದ್ಯ ರತ್ನ" ಪ್ರಶಸ್ತಿ ನೀಡಿ ಪುರಷ್ಕರಿಸಿದೆ.

Next Story





