ಪಾಲ್ಘಾರ್‌ನಲ್ಲಿ 4.3 ತೀವ್ರತೆಯ ಭೂಕಂಪ

ಪಾಲ್ಘಾರ್, ಮಾ. 1: ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ವಿವಿಧ ಭಾಗಗಳಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಿಂದ ಈ ವಲಯದಲ್ಲಿ ದಾಖಲಾದ ಅತಿ ತೀವ್ರತೆಯ ಭೂಕಂಪದ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಲ್ಗಾರ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮುಖ್ಯವಾಗಿ ದಹಾನು ಹಾಗೂ ತಲಸಾರಿ ತಾಲೂಕುಗಳಲ್ಲಿ ನವೆಂಬರ್‌ನಿಂದ ನಿರಂತರ ಇಂತಹ ಭೂಕಂಪನಗಳು ಸಂಭವಿಸುತ್ತಿವೆ.
ಕಳೆದ ಫೆಬ್ರವರಿಯಲ್ಲಿ ಕೊನೆಯ ಭೂಕಂಪ ಸಂಭವಿಸಿತ್ತು. ಇಂದು ಬೆಳಗ್ಗೆ 11.14 ಭೂಕಂಪದ ಅನುಭವವಾಯಿತು. ಈ ಭೂಕಂಪ ರಿಕ್ಟರ್ ಮಾಪಕದಲ್ಲಿ 4.3 ದಾಖಲಾಗಿದೆ. ಕಳೆದ ಮೂರು ತಿಂಗಳಲ್ಲಿ ಸಂಭವಿಸಿದ ಭೂಕಂಪಗಳಲ್ಲಿ ಇದು ಗರಿಷ್ಠ ತೀವ್ರತೆ ಹೊಂದಿತ್ತು ಎಂದು ಪ್ರಾದೇಶಿಕ ವಿಕೋಪ ಮ್ಯಾನೇಜ್‌ಮೆಂಟ್‌ನ ಘಟಕ (ಆರ್‌ಡಿಎಂಸಿ) ಮುಖ್ಯಸ್ಥ ಸಂತೋಷ್ ಕದಂ ಹೇಳಿದ್ದಾರೆ. ಭೂಕಂಪದ ಕೇಂದ್ರ ಈಗ ಮತ್ತೊಮ್ಮೆ ದಹಾನು ತಾಲೂಕಿನ ದುಂಡಲ್ವಾಡಿ ಗ್ರಾಮವಾಗಿತ್ತು. ನಿರಂತರ ಭೂಕಂಪದ ಭೀತಿಯಿಂದ ದಹಾನು ಗ್ರಾಮದ ಹಾಗೂ ತಲಸಾರಿ ತಾಲೂಕುಗಳ ಜನರು ದಿನವನ್ನು ಮನೆಯ ಹೊರಗೆ ಕಳೆದರು.





