ನ್ಯಾಶನಲ್ ಹೆರಾಲ್ಡ್ ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಎಜೆಎಲ್ ನಿರ್ಧಾರ

ಹೊಸದಿಲ್ಲಿ, ಮಾ. 1: ಇಲ್ಲಿನ ಹೆರಾಲ್ಡ್ ಹೌಸ್ ಅನ್ನು ತೆರವುಗೊಳಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಲು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ನಿರ್ಧರಿಸಿದೆ.
ನಿನ್ನೆ ಸಂಜೆ ನಾವು ನೋಟಿಸ್ ಸ್ವೀಕರಿಸಿದೆವು. ನಾವು ಮುಂದಿನ ವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ ಎಂದು ಮಾಹಿತಿ ನೀಡಿದ್ದೇವೆ. ಆದರೂ ಅಧಿಕಾರಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು ಇಂದು ಇಲ್ಲಿಗೆ ಯಾಕೆ ಆಗಮಿಸಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಇಲ್ಲಿಂದ ತೆರವುಗೊಳ್ಳುವ ಮಾತೇ ಇಲ್ಲ ಎಂದು ನ್ಯಾಶನಲ್ ಹೆರಾಲ್ಡ್ ಪ್ರಕರಣದ ವಕೀಲ ನಿಖಿಲ್ ಭಲ್ಲಾ ತಿಳಿಸಿದ್ದಾರೆ. ನಗರಾಭಿವೃದ್ಧಿ ಸಚಿವಾಲಯದ ಭೂಮಿ ಹಾಗೂ ಅಭಿವೃದ್ಧಿ ತಂಡ ಹೆರಾಲ್ಡ್ ಹೌಸ್ ಅನ್ನು ವಶಕ್ಕೆ ತೆಗೆದುಕೊಳ್ಳಲು ಇಲ್ಲಿಗೆ ತಲುಪಿದ ಬಳಿಕ ಅವರ ಈ ಹೇಳಿಕೆ ಹೊರಬಿದ್ದಿದೆ. ಯಂಗ್ ಇಂಡಿಯಾ ಮಾಲಕತ್ವದ ಎಜೆಐಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ತಾಯಿ ಸೋನಿಯಾ ಗಾಂಧಿ ದೊಡ್ಡ ಪಾಲು ಹೊಂದಿದ್ದಾರೆ.
Next Story





