ಇಮ್ರಾನ್ ಖಾನ್ ಪಾಕ್ ಸೇನೆಯ ಟೇಪ್ ರೆಕಾರ್ಡರ್: ಸುಬ್ರಮಣಿಯನ್ ಸ್ವಾಮಿ

ಹೊಸದಿಲ್ಲಿ, ಮಾ. 1: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪಾಕ್ ಸೇನೆಯ ‘ಟೇಪ್ ರೆಕಾರ್ಡರ್’ ಎಂದು ಶುಕ್ರವಾರ ಹೇಳಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಭಾರತ ಅವರೊಂದಿಗೆ ಮಾತುಕತೆ ನಡೆಸುವುದರ ಬದಲು ಪಾಕಿಸ್ತಾನದ ಸೇನಾ ವರಿಷ್ಠರೊಂದಿಗೆ ಮಾತುಕತೆ ನಡೆಸುವುದು ಉತ್ತಮ ಎಂದಿದ್ದಾರೆ.
‘‘ಇಮ್ರಾನ್ ಖಾನ್ ಅವರು ಸೇನೆಯ ಟೇಪ್ ರೆಕಾರ್ಡರ್. ಸೇನೆ ಏನು ಹೇಳುತ್ತದೋ ಅದನ್ನು ಅವರು ಹೇಳುತ್ತಾರೆ. ಅವರೊಂದಿಗೆ ಶಾಂತಿ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥ ಇಲ್ಲ. ಅದಕ್ಕಿಂತ ಸೇನಾ ಜನರಲ್ ಅವರೊಂದಿಗೆ ಮಾತುಕತೆ ನಡೆಸಬಹುದು’’ ಎಂದು ಅವರು ಹೇಳಿದ್ದಾರೆ.
Next Story





