ನ್ಯಾಯಮೂರ್ತಿ ವಾಲ್ಮೀಕಿ ಮೆಹ್ತಾ ನಿಧನ

ಹೊಸದಿಲ್ಲಿ, ಮಾ. 1: ದಿಲ್ಲಿ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿ ವಾಲ್ಮೀಕಿ ಜೆ. ಮೆಹ್ತಾ ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. 2009 ಎಪ್ರಿಲ್ 15ರಂದು ಅವರು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ್ದರು.
1959 ಎಪ್ರಿಲ್ 6ರಂದು ಮುಂಬೈಯಲ್ಲಿ ಜನಿಸಿದ್ದ ಮೆಹ್ತಾ ಅವರು ವಿಶಾಖಪಟ್ಟಣಂನ ಕೇಂದ್ರೀಯ ವಿದ್ಯಾಲಯದಲ್ಲಿ ಶಾಲೆ ಶಿಕ್ಷಣ ಪಡೆದಿದ್ದರು. ಅನಂತರ ದಿಲ್ಲಿ ವಿ.ವಿ.ಯ ಶ್ರೀ ವೆಂಕಟೇಶ್ವರ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿದ್ದರು. ಬಳಿಕ ದಿಲ್ಲಿ ವಿಶ್ವವಿದ್ಯಾನಿಲಯದಿಂದ ಎಲ್‌ಎಲ್‌ಬಿ ಪಡೆದಿದ್ದಾರೆ.
Next Story





