ಸೌರವ್ ಸವಾಲು ಅಂತ್ಯ
ವಿಶ್ವ ಸ್ಕ್ವಾಷ್ ಚಾಂಪಿಯನ್‌ಶಿಪ್
ಚಿಕಾಗೊ, ಮಾ.1: ವಿಶ್ವ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸೌರವ್ ಘೋಷಾಲ್ ಸವಾಲು ಅಂತ್ಯವಾಗಿದೆ. ಇಲ್ಲಿ ಗುರುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಘೋಷಾಲ್ ಜರ್ಮನಿಯ ಸಿಮೊನ್ ರೊಸ್ನರ್ ವಿರುದ್ಧ 11-8, 11-6, 11-7 ಅಂತರದಿಂದ ಶರಣಾದರು.
ಮೊದಲ ಬಾರಿ ಕ್ವಾರ್ಟರ್ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದ ಮೂರನೇ ಶ್ರೇಯಾಂಕದ ರೋಸ್ನರ್ 50 ನಿಮಿಷಗಳ ಮ್ಯಾರಥಾನ್ ಪಂದ್ಯದಲ್ಲಿ ಗೆಲುವು ದಾಖಲಿಸಿದರು. ಘೋಷಾಲ್ ಉತ್ತಮ ಪ್ರದರ್ಶನ ನೀಡಲು ಯತ್ನಿಸಿದರೂ ಅಗ್ರ ರ್ಯಾಂಕಿನ ಜರ್ಮನಿ ಆಟಗಾರನಿಗೆ ಸೋತಿದ್ದಾರೆ.
Next Story





