Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮಳೆಗಾಲ ಆರಂಭಕ್ಕೂ ಮೊದಲು ಮನೆ...

ಮಳೆಗಾಲ ಆರಂಭಕ್ಕೂ ಮೊದಲು ಮನೆ ಹಸ್ತಾಂತರಕ್ಕೆ ಕ್ರಮ: ಕೊಡಗು ಜಿಲ್ಲಾಧಿಕಾರಿ ಕಣ್ಮಣಿ ಜಾಯ್ ಭರವಸೆ

ವಾರ್ತಾಭಾರತಿವಾರ್ತಾಭಾರತಿ2 March 2019 6:53 PM IST
share
ಮಳೆಗಾಲ ಆರಂಭಕ್ಕೂ ಮೊದಲು ಮನೆ ಹಸ್ತಾಂತರಕ್ಕೆ ಕ್ರಮ: ಕೊಡಗು ಜಿಲ್ಲಾಧಿಕಾರಿ ಕಣ್ಮಣಿ ಜಾಯ್ ಭರವಸೆ

ಮಡಿಕೇರಿ, ಮಾ.2: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮಳೆಗಾಲ ಆರಂಭವಾಗುವುದಕ್ಕೆ ಮೊದಲು ಮನೆಗಳನ್ನು ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.   

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮದೆ ಮತ್ತು ಕರ್ಣಂಗೇರಿಯಲ್ಲಿ 55 ಮನೆಗಳ ನಿರ್ಮಾಣ ಕಾಮಗಾರಿ ಮೇಲ್ಚಾವಣಿ ಹಂತ ತಲುಪಿದೆ ಎಂದು ಅನೀಸ್ ಕಣ್ಮಣಿ ಜಾಯ್ ಅವರು ವಿವರಿಸಿದರು.  

ಪ್ರಥಮ ಹಂತದಲ್ಲಿ ಮನೆ ಕಳೆದುಕೊಂಡ 840 ನಿರಾಶ್ರಿತರನ್ನು ಗುರಿತಿಸಲಾಗಿತ್ತು, ಬಳಿಕ ಕೆಲವರ ಹೆಸರು ಕೈಬಿಟ್ಟಿದೆ ಎಂಬ ದೂರುಗಳು ಕೇಳಿಬಂದ ಹಿನ್ನಲೆ, ಕೈಬಿಟ್ಟಿರುವವರನ್ನು ಸೇರ್ಪಡೆ ಮಾಡಲು ಕ್ರಮವಹಿಸಲಾಗಿದೆ. ಈಗಾಗಲೇ ಜಂಬೂರು ಮದೆ, ಕರ್ಣಂಗೇರಿ ಮತ್ತಿತ್ತರ ಕಡೆಗಳ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.  

ಮೊದಲ ಆದ್ಯತೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಸಂತ್ರಸ್ತರಿಗೆ ಮನೆ ನಿರ್ಮಿಸುವುದು, ಎರಡನೇ ಆದ್ಯತೆಯಲ್ಲಿ ಸಂತ್ರಸ್ತರು ಸ್ವತಃ ಮನೆ ಕಟ್ಟಿಕೊಳ್ಳಲು ಮುಂದೆ ಬಂದವರಿಗೆ ಹಣ ಪಾವತಿಸುವುದು, ಮೂರನೇ ಆದ್ಯತೆ ಸಂತ್ರಸ್ತರ ಜಾಗದಲ್ಲಿ ಏಜನ್ಸಿಗಳ ಮೂಲಕ ಮನೆ ನಿರ್ಮಾಣಕ್ಕೆ ಕ್ರಮವಹಿಸುವುದು. ಸರ್ಕಾರಿ ಭೂಮಿಯಲ್ಲಿ ಏಜೆನ್ಸಿಗಳಿಂದ ಮನೆ ನಿರ್ಮಿಸಿ ಕೊಡುವುದು. ಈ ಕಾರ್ಯಗಳು ನಡೆದಿದ್ದು, ಇನ್ಫೋಸಿಸ್ ಮತ್ತು ಪಿಟ್ಟೂಸ್ ಸಂಸ್ಥೆಗಳು ಮುಂದೆ ಬಂದಿವೆ. ಇವರಲ್ಲಿ ಈಗಾಗಲೇ ಇನ್ಫೋಸಿಸ್ ಸಂಸ್ಥೆಗೆ ಜಂಬೂರಿನಲ್ಲಿ ಜಾಗ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.   

ಪರಿಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೀವ ಹಾನಿಯಾದ 19 ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರದ ಚೆಕ್ ನೀಡಲಾಗಿದೆ. ಗೃಹ ಉಪಯೋಗಿ ವಸ್ತುಗಳನ್ನು ಕಳೆದುಕೊಂಡ 4,564 ಕುಟುಂಬದವರಿಗೆ ಮೊದಲ ಕಂತಿನಲ್ಲಿ 3,800 ರೂ ನಂತೆ 1.73 ಕೋಟಿ ರೂ ಪರಿಹಾರ ಪಾವತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 

ಭಾಗಶಃ ಮನೆ ಹಾನಿಯಾದ 2871 ಕುಟುಂಬಗಳಿಗೆ ಒಟ್ಟು 4.29 ಕೋಟಿ ಪರಿಹಾರವನ್ನು ವಿತರಿಸಲಾಗಿದೆ. ಸಂಪೂರ್ಣ ಹಾಗೂ ತೀವ್ರ ಮನೆ ಹಾನಿಯಾದ 1045 ಕುಟುಂಬಗಳಿಗೆ ತಲಾ 1.03 ಲಕ್ಷದಂತೆ ಒಟ್ಟು 6. 31 ಕೋಟಿ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಕುಟುಂಬಕ್ಕೆ 50 ಸಾವಿರ ರೂಪಾಯಿಗಳಂತೆ ಒಟ್ಟು 5.10 ಕೋಟಿ ಹೆಚ್ಚುವರಿ ಪರಿಹಾರವನ್ನು ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಎನ್‍ಇಎಫ್‍ಟಿ ಮೂಲಕ ಜಮಾ ಮಾಡಲಾಗಿರುತ್ತದೆ. ಮನೆ ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ತಿಂಗಳಿಗೆ ರೂ.10 ಸಾವಿರದಂತೆ ಮನೆ ಬಾಡಿಗೆಯನ್ನು ನೀಡಲಾಗುತ್ತಿದೆ. ಸಂಪೂರ್ಣ ಮನೆ ಹಾನಿಯಾದ 1020 ಕುಟುಂಬದವರಿಗೆ ತಲಾ 50 ಸಾವಿರ ರೂ ಪಾವತಿಸಲಾಗಿದೆ. 470 ಕುಟುಂಬಗಳಿಗೆ ಬಾಡಿಗೆ ಭರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.   

ಬೆಳೆ ಪರಿಹಾರಕ್ಕೆ 133 ಕುಟುಂಬಗಳ ಬ್ಯಾಂಕ್ ಖಾತೆಯ ರೆಸಿಪೆಂಟ್ ಐಡಿ, ಐಎಫ್‍ಎಸ್‍ಸಿ ಕೋಡ್ ವ್ಯತ್ಯಾಸವಾಗಿರುವುದು ತಿಳಿದುಬಂದಿತ್ತು, ಇದರಲ್ಲಿ 63 ಕುಟುಂಬಗಳ ರೆಸಿಪೆಂಟ್ ಐಡಿ, ಐಎಫ್‍ಎಸ್‍ಸಿ ಕೋಡ್ ಸರಿಪಡಿಸಲಾಗಿದೆ. ಉಳಿದವನ್ನು ಒಂದೆರಡು ದಿನಗಳಲ್ಲಿ ಸರಿಪಡಿಸಿ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನುಡಿದರು.  ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರಿಂದ ಸಾಕಷ್ಟು ಪರಿಹಾರ ಸಾಮಾಗ್ರಿಗಳು ಕೊಡಗು ಜಿಲ್ಲೆಗೆ ಹರಿದುಬಂದವು. ಈಗಾಗಲೇ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ಒದಗಿಸಲಾಗಿದೆ. ಉಳಿದಂತೆ ಗೋದಾಮಿನಲ್ಲಿ ಇರುವ ಸಾಮಗ್ರಿಗಳನ್ನು ಎರಡು ವಾರದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. 

ಪ್ರಕೃತಿ ವಿಕೋಪದಿಂದಾಗಿ 29,266 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಸೇರಿದಂತೆ ವಿವಿಧ ಬೆಳೆಗಳ ಹಾನಿಯಾಗಿದ್ದು, ಈಗಾಗಲೇ 14,609 ಹೆಕ್ಟೇರ್ ಪ್ರದೇಶಕ್ಕೆ ಪರಿಹಾರ ಪಾವತಿಸಲಾಗಿದೆ. ಸುಮಾರು 34 ಸಾವಿರ ರೈತ ಕುಟುಂಬಗಳಲ್ಲಿ 28,208 ರೈತರು ಹೆಸರು ನೊಂದಾಯಿಸಿದ್ದಾರೆ. ಶೇ.64 ರಷ್ಟು ಕುಟುಂಬಗಳು ಹೆಸರು ನೋಂದಾಯಿಸಿದ್ದು, 17 ಕೋಟಿ ರೂ ಪರಿಹಾರ ಪಾವತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪ್ರಕೃತಿ ವಿಕೋಪದಿಂದಾಗಿ ಸುಮಾರು 1,309 ಹೆಕ್ಟೇರ್ ಪ್ರದೇಶದಲ್ಲಿ ಭೂಮಿ ಹಾನಿಯಾಗಿದ್ದು (ಭೂ ಕುಸಿತ, ಬರೆ ಕುಸಿತ, ಭೂಮಿ ಕೊಚ್ಚಿಕೊಂಡು ಹೋಗಿರುವುದು) ಒಂದು ಹೆಕ್ಟೇರ್ ಪ್ರದೇಶಕ್ಕೆ 18 ಸಾವಿರ ರೂ ಪರಿಹಾರ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆ ಬೆಟ್ಟಗುಡ್ಡಗಳಿಂದ ಆವೃತ್ತವಾಗಿದ್ದು ಭೂಕುಸಿತ ಉಂಟಾಗುವ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕೆ ವಹಿಸುವಂತಾಗಬೇಕು ಎಂಬ ಮಾಹಿತಿ ಕೇಳಿ ಬರುತ್ತಿರುವ ಹಿನ್ನೆಲೆ, ಭಾರತೀಯ ಭೂವಿಜ್ಞಾನ ಸಂಸ್ಥೆಯು (ಜಿಐಎಸ್) ಜಿಲ್ಲೆಯ ನಾನಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮಾರ್ಚ್ 30 ರೊಳಗೆ ವರದಿ ನೀಡಲಿದ್ದಾರೆ. ಪ್ರಕೃತಿ ವಿಕೋಪದ ಪುನರ್ವಸತಿ ಕಾರ್ಯಗಳು ಚುರುಕಿನಿಂದ ನಡೆಯುತ್ತಿದ್ದು, ಮನೆ ನಿರ್ಮಾಣ ಸೇರಿದಂತೆ ಲೋಕೋಪಯೋಗಿ, ಜಿ.ಪಂ ಹಾಗೂ ಹೆದ್ದಾರಿ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆಗಾಲ ಆರಂಭವಾಗುವುದಕ್ಕೂ ಮೊದಲು ಕಾಮಗಾರಿಗಳನ್ನು ಪೂರ್ಣಗೊಳಿಸುವ ಪ್ರಯತ್ನ ನಡೆದಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. 

ಅಭಿವೃದ್ಧಿ ಕಾರ್ಯಗಳ ವಿವರ
ಸಂತ್ರಸ್ತರ ಪುನರ್ವಸತಿಗಾಗಿ ಮಡಿಕೇರಿ ತಾಲೂಕಿನ ಕರ್ಣಂಗೇರಿ, ಗಾಳಿಬೀಡು, ಬಿಳಿಗೇರಿ, ಮದೆ ಮತ್ತು ಸಂಪಾಜೆ ಗ್ರಾಮಗಳಲ್ಲಿ ಒಟ್ಟು 29 ಎಕರೆ ಹಾಗೂ ಸೋಮವಾರಪೇಟೆ ತಾಲೂಕಿನ ಜಂಬೂರು ಭೂಮಿ ಕಾಯ್ದಿರಿಸಲಾಗಿದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ಅನುಮೋದನೆಗೊಂಡ ವಿನ್ಯಾಸ ನಕ್ಷೆಯಂತೆ ಸುಸಜ್ಜಿತ ಬಡಾವಣೆ ಮಾಡಲಾಗುತ್ತಿದೆ. 

ಪ್ರಕೃತಿ ವಿಕೋಪ ನಡೆದ ಸಂದರ್ಭದಲ್ಲಿ 840 ಮನೆಗಳು ತೀವ್ರ ಅಥವಾ ಸಂಪೂರ್ಣ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿತ್ತು. ನಂತರದಲ್ಲಿ ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ 501 ಮನೆಗಳು ತೀವ್ರ ಹಾನಿ ಹಾಗೂ 662 ಮನೆಗಳು ಭಾಗಶ: ಹಾನಿಯಾಗಿರುವ ಬಗ್ಗೆ ವರದಿ ಸಲ್ಲಿಸಿದರು. ಈ ಪಟ್ಟಿಯನ್ನು ಪರಿಶೀಲಿಸಲು ಜಿಲ್ಲಾ ಮಟ್ಟದ ಸಮಿತಿ ರಚಿಸಿ 3 ನೇ ವ್ಯಕ್ತಿ ಪರಿಶೀಲನೆ ಮಾಡಿ, ತೀವ್ರ ಹಾನಿಯೆಂದು ಪರಿಗಣಿಸಲಾಗಿದ್ದ 501 ಮನೆಗಳ ಪೈಕಿ 414 ಮನೆಗಳು ಮಾತ್ರ ತೀವ್ರ ಹಾನಿಯಾಗಿದೆಯೆಂದು ಧೃಢೀಕರಿಸಿರುತ್ತಾರೆ. ಭಾಗಶ: ಹಾನಿಯಾಗಿರುವ ಪಟ್ಟಿಯಲ್ಲಿನ 6,612 ಮನೆಗಳ ಸ್ಥಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ. ಮೊದಲನೆಯ ಹಂತದಲ್ಲಿ ಸಂಪೂರ್ಣವಾಗಿ ಮನೆ ಕಳೆದುಕೊಂಡ 414 ಕುಟುಂಬಗಳಿಗೆ ಪ್ರತಿ ಮನೆಗೆ ರೂ 9.85 ಲಕ್ಷಗಳ ವೆಚ್ಚದಲ್ಲಿ ಅತ್ಯಾಧುನಿಕ ಭೂಕಂಪನ ನಿರೋಧಕ ತಂತ್ರಜ್ಞಾನ ಬಳಸಿ ರಾಜೀವ್ ಗಾಂಧಿ ಗ್ರಾಮೀಣ ಗೃಹ ನಿರ್ಮಾಣ ಮಂಡಳಿಯಿಂದ ಒಟ್ಟು 40.77 ಕೋಟಿ ವೆಚ್ಚದಲ್ಲಿ ಮನೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. 

ಈಗಾಗಲೇ 55 ಮನೆಗಳ ಮೇಲ್ಚಾವಣಿಯವರೆಗಿನ ಕೆಲಸ ಪೂರ್ಣಗೊಂಡಿದ್ದು, ಫಿನಿಷಿಂಗ್ ಕೆಲಸ ಪ್ರಗತಿಯಲ್ಲಿದೆ, 83 ಜನರು ತಮ್ಮ ಸ್ವಂತ ಜಾಗದಲ್ಲಿ ಸರ್ಕಾರದ ಅನುದಾನದೊಂದಿಗೆ ಮನೆ ನಿರ್ಮಾಣ ಮಾಡಲು ಆಸಕ್ತರಿದ್ದು, ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಕೋರಲಾಗಿದೆ. ಜಂಬೂರು ಗ್ರಾಮದಲ್ಲಿ ಇನ್ಫೋಶೀಸ್ ಫೌಂಡೇಶನ್ ವತಿಯಿಂದ ಮನೆ ನಿರ್ಮಿಸಿಕೊಡುವುದಕ್ಕೆ ಒಪ್ಪಿಗೆ ಸೂಚಿಸಿದ 83 ಕುಟುಂಬಗಳ ದಾಖಲೆಗಳನ್ನು ಈ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಎರಡನೇ ಹಂತದಲ್ಲಿ ಅಪಾಯದ ಹಂಚಿನಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೂ ಪುನರ್ವಸತಿಯನ್ನು ನೀಡಲು ಉದ್ದೇಶಿಸಲಾಗಿದೆ. ಪ್ರಕೃತಿ ವಿಕೋಪದಿಂದ ಹಾನಿಯಾದ ಪ್ರದೇಶಗಳ ಅಧ್ಯಯನವನ್ನು ಭಾರತೀಯ ಭೂ ವಿಜ್ಞಾನಗಳ ಸಂಸ್ಥೆಯ ಭೂ ವಿಜ್ಞಾನಗಳು ನಡೆಸುತ್ತಿದ್ದು, ಅವರ ವರದಿಯ ಆಧಾರದ ಮೇಲೆ ಕೆಲವೊಂದು ಅಪಯಕಾರಿ ಪ್ರದೇಶದಿಂದ ಅವಶ್ಯಕತೆ ಇದ್ದಲ್ಲಿ ಜನರನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.  

ಪ್ರಕೃತಿ ವಿಕೋಪದ ನಂತರದಲ್ಲಿ ಸಂತ್ರಸ್ತರಿಗೆ ಹಂಚಿಕೆ ಮಾಡಿದ ನಂತರ ಮಡಿಕೇರಿ ಹಾಗೂ ಕುಶಾಲನಗರ ದಾಸ್ತಾನು ಕೇಂದ್ರದಲ್ಲಿ ಉಳಿದಿದ್ದ ಸಹಾಯ ಸಾಮಾಗ್ರಿಗಳನ್ನು ಅಗತ್ಯತೆಗೆ ಅನುಗುಣವಾಗಿ ಮತ್ತೊಮ್ಮೆ ಸಂತ್ರಸ್ತರಿಗೆ ಹಂಚಿಕೆ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದ ಅಗತ್ಯ ಸಾಮಾಗ್ರಿಗಳನ್ನು ಒಳಗೊಂಡ 870 ಕಿಟ್‍ಗಳನ್ನು ವಿತರಿಸಲಾಗಿದೆ. ಅಲ್ಲದೆ ಅಕ್ಕಿ, ಸೋಪ್, ಬ್ಲಾಂಕೇಟ್, ಬಟ್ಟೆ, ಸಾನಿಟರಿ ಪ್ಯಾಡ್ ಮತ್ತಿತರ ವಸ್ತುಗಳನ್ನು ವಿವಿಧ ಇಲಾಖೆಗಳಿಂದ ನಡೆಸಲಾಗುತ್ತಿರುವ ವಸತಿ ಗೃಹಗಳಿಗೆ, ವೃಧ್ಧಾಶ್ರಮಗಳಿಗೆ, ಅನಾಥಾಲಯಗಳಿಗೆ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗಿದೆ. ಪ್ರಸ್ತುತ ಮಡಿಕೇರಿಯ ದಾಸ್ತಾನು ಕೇಂದ್ರದಲ್ಲಿ ಅಂದಾಜು 3 ಸಾವಿರ ಬಟ್ಟೆಗಳು, 200 ಸೀರೆಗಳು, 400 ಜೋಡಿ ಚಪ್ಪಲಿ, 20 ಸಾವಿರ ಸೋಪು, 400 ಬ್ಲಾಂಕೇಟ್, 400 ಟೂತ್ ಪೇಸ್ಟ್ ಇತ್ಯಾದಿ ವಸ್ತುಗಳು ಇದೆ ಎಂದು ತಿಳಿಸಿದರು. 

ಲೋಕೋಪಯೋಗಿ ಇಲಾಖೆ
ಜಿಲ್ಲೆಯಲ್ಲಿ ಜೂನ್ 2018 ರಿಂದ ಆಗಸ್ಟ್ 2018ರ ವರೆಗೆ ಸುರಿದ ಭಾರೀ ಮಳೆಯಿಂದಾಗಿ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸೆಗಳ ಮೇಲೆ ಮಣ್ಣು ಜರಿದು ಹಾಗೂ ರಸ್ತೆ ಕುಸಿದು ತೀವ್ರ ಹಾನಿಯಾಗಿದೆ. ಈ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲು ತುರ್ತಾಗಿ ದುರಸ್ತಿಗೊಳಿಸಿ 50 ಲಕ್ಷಗಳ ವೆಚ್ಚದಲ್ಲಿ 53 ಕಾಮಗಾರಿ ಕೈಗೊಂಡು ಪೂರ್ಣಗೊಳಿಸಬೇಕಿದೆ.   

ಮುಂದುವರೆದಂತೆ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಳೆ ಹಾನಿ ದುರಸ್ತಿ ಅನುದಾನದಲ್ಲಿ 44.35 ಕೋಟಿ ರೂ. ದೊರೆತಿದ್ದು ಆಡಳಿತಾತ್ಮಕ ಅನುಮೋದನೆ ನೀಡಲಾದ 81 ಕಾಮಗಾರಿಗಳನ್ನು ಕೈಗೆತ್ತಿಕೊಂಡು 51 ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಉಳಿದ 30 ಕಾಮಗಾರಿ ಪ್ರಗತಿಯಲ್ಲಿದೆ. ಹಾನಿಗೊಳಗಾದ ರಸ್ತೆಗಳ ಸುರಕ್ಷತಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತಜ್ಞರನ್ನು ಸಂಪರ್ಕಿಸಿದ್ದು, ಅವರಿಂದ ಸ್ಥಳ ಪರಿಶೀಲನೆ ಮಾಡಿಸಿ ಸಲಹೆ ಪಡೆಯಲಾಗಿದೆ.   

ಲೋಕೋಪಯೋಗಿ ಇಲಾಖೆಯ ಎಲ್ಲಾ ರಸ್ತೆಗಳನ್ನು (ರಾಜ್ಯ ಹೆದ್ದಾರಿ 201.40 ಕಿಮೀ ಮತ್ತು ಜಿಲ್ಲಾ ಮುಖ್ಯ ರಸ್ತೆ 280.95 ಕಿ.ಮೀ ಒಟ್ಟು 482.35 ಕಿ.ಮೀ) ಶಾಶ್ವತವಾಗಿ ದುರಸ್ತಿಗೊಳಿಸಲು 118 ಸಂಖ್ಯೆಯ ರೂ 394.70 ಕೋಟಿಯ ಕಾರ್ಯಕ್ರಮ ಪಟ್ಟಿಯನ್ನು ತಯಾರಿಸಿ ಅನುದಾನದೊಂದಿಗೆ ಅನುಮೋದನೆಗೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ (ಪಿಎಂಜಿಎಸ್‍ವೈ):- ಯೋಜನಾ ಉಪ ವಿಭಾಗ ವ್ಯಾಪ್ತಿಯ ನಮ್ಮ ಗ್ರಾಮ ನಮ್ಮ ರಸ್ತೆ ಹಾಗೂ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಒಟ್ಟು 10 ರಸ್ತೆಗಳು ಮತ್ತು 1 ಇತರೆ ಕಾಮಗಾರಿ 2018-19 ನೇ ಸಾಲಿನಲ್ಲಿ ಸುರಿದ ಭಾರಿ ಮಳೆಗೆ ಹಾನಿಯಾಗಿರುತ್ತದೆ. ತಾತ್ಕಾಲಿಕ ರಸ್ತೆ ಸಂಪರ್ಕಕ್ಕಾಗಿ 31.21 ಲಕ್ಷಗಳ 11 ಕಾಮಗಾರಿಗಳಿಗೆ ಮಂಜೂರಾತಿ ನೀಡಿ ಈವರೆಗೆ 23.37 ಲಕ್ಷ ಬಿಡುಗಡೆ ಮಾಡಲಾಗಿದೆ. ಮೇಲಿನ ರಸ್ತೆಗಳ ಪೈಕಿ 6 ರಸ್ತೆಗಳ ಆಯ್ದ ಭಾಗಗಳಲ್ಲಿ ಶಾಶ್ವತ ದುರಸ್ತಿ ಕೈಗೊಳ್ಳಲು 5.05 ಕೋಟಿಗಳ 6 ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ 3.86 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮೇಲಿನ 6 ಕಾಮಗಾರಿಗಳ ಪೈಕಿ 5 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಉಳಿದ 01 ಕಾಮಗಾರಿಯು ಪ್ರಾರಂಭ ಹಂತದಲ್ಲಿರುತ್ತದೆ.

ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ: ಪ್ರಕೃತಿ ವಿಕೋಪದಿಂದಾಗಿ ಆದ ಮಳೆ ಹಾಗೂ ಭೂಕುಸಿತಕ್ಕೆ ರಸ್ತೆಗಳು, ಅಂಗನವಾಡಿ ಕಟ್ಟಡಗಳು, ಶಾಲಾ ಕಟ್ಟಡಗಳು, ಮೋರಿಗಳು ಹಾಳಾಗಿದ್ದು, ಇದರ ದುರಸ್ತಿಗಾಗಿ ಒಟ್ಟಾರೆ ಅಂದಾಜು ಮೊತ್ತ 10.28 ಕೋಟಿ ಜಿಲ್ಲಾಡಳಿತದಿಂದ ಮಂಜೂರಾಗಿದೆ. ಮೇಲಿನ ದುರಸ್ತಿ ಕಾಮಗಾರಿಗಳನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಒಟ್ಟು 631 ಕಾಮಗಾರಿಗಳನ್ನು ಕೈಗೆಟ್ಟುಗೊಳ್ಳಲಾಗಿದೆ. ಇದರ ಪೈಕಿ 43.8 ಕೋಟಿ ರೂ ವೆಚ್ಚದಲ್ಲಿ 488 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿರುತ್ತದೆ. ಉಳಿದ 143 ಕಾಮಗಾರಿಗಳು ಮುಕ್ತಾಯ ಹಂತದಲ್ಲಿದೆ.

2 ನೇ ಹಂತದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಜಿಲ್ಲೆಗೆ ಒಟ್ಟು 28 ಕೊಟಿ ಅನುದಾನ ನಿಗದಿಯಾಗಿದೆ. ಈ  ಅನುದಾನದಲ್ಲಿ ಒಟ್ಟು 166 ಕಾಮಗಾರಿಗಳನ್ನು ತ್ವರಿತವಾಗಿ ನಡೆಸಲಾಗುತ್ತಿದ್ದು, ಇದರ ಪೈಕಿ 34 ಕಾಮಗಾರಿಗಳು ಪೂರ್ಣಗೊಂಡಿದೆ. ಈ 2 ನೇ ಹಂತದ ಕಾಮಗಾರಿಗಳನ್ನು ಸರ್ಕಾರ ನೀಡಿರುವ ವಿನಾಯಿತಿಯಂತೆ 4(ಜಿ) ಅಡಿಯಲ್ಲಿ ನಿರ್ವಹಿಸಲಾಗುತ್ತಿದೆ.  

ನಗರಾಭಿವೃದ್ಧಿ ಇಲಾಖೆ (ಸ್ಥಳೀಯ ಸಂಸ್ಥೆಗಳು): ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾದ ರಸ್ತೆ, ತಡೆಗೋಡೆ ಹಾಗೂ ಇತರೆ ದುರಸ್ತಿ ಕಾಮಗಾರಿಗಳಿಗೆ ಒಟ್ಟು 3.62 ಕೋಟಿಯ 17 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 2.92 ಕೊಟಿಯ 5 ಕಾಮಗಾರಿಗಳು, ವಿರಾಜಪೇಟೆ ಪ.ಪಂ ವ್ಯಾಪ್ತಿಯಲ್ಲಿ 20 ಲಕ್ಷಗಳ 4 ಕಾಮಗಾರಿಗಳು, ಹಾಗೂ ಕುಶಾಲನಗರ ಪ.ಪಂ ವ್ಯಾಪ್ತಿಯಲ್ಲಿ 30 ಲಕ್ಷಗಳ 3 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ: ಇಲಾಖಾ ವತಿಯಿಂದ ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಗ್ರಾಮಗಳಲ್ಲಿನ ಜಾನುವಾರುಗಳ ರಕ್ಷಣೆ ಹಾಗೂ ಪಾಲನೆಗಾಗಿ ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ಗೋಶಾಲೆಯನ್ನು ಪ್ರಾರಂಭಿಸಿ ಒಟ್ಟು 120 ಜಾನುವಾರುಗಳನ್ನು  ಪೋಷಿಸಿ, ಸಂಬಂಧಪಟ್ಟ ಮಾಲಕರಿಗೆ ಹಿಂದಿರುಗಿಸಲಾಗಿದೆ. 15 ಟನ್ ಪಶು ಆಹಾರ ಖರೀದಿ ಸೇರಿದಂತೆ ಒಟ್ಟು 40.45 ಟನ್ ಪಶು ಆಹಾರವನ್ನು ದಾಸ್ತಾನಿರಿಸಿ ಗೋಶಾಲೆಗಳಿಗೆ ಹಾಗೂ ಗ್ರಾಮಗಳಿಗೆ ತೆರಳಿ ವಿತರಿಸಲಾಗುತ್ತಿದೆ. ರೂ.7.40 ಲಕ್ಷಗಳ ಜೌಷಧಿ ಹಾಗೂ ಲವಣ ಮಿಶ್ರಣವನ್ನು ಖರೀದಿಸಿ ಉಪಯೋಗಿಸಲಾಗುತ್ತಿದೆ ಪ್ರಕೃತಿ ವಿಕೋಪಕ್ಕೆ 125 ಜಾನುವಾರುಗಳು, 27 ಮೇಕೆಗಳು ಮರಣ ಹೊಂದಿವೆ. ಜಾನುವಾರು ಮಾಲಿಕರಿಗೆ 30.82 ಲಕ್ಷ ಪರಿಹಾರ ವಿತರಿಸಲಾಗಿದೆ. ಜಾನುವಾರು ಸಾಕಾಣಿಕೆಗಾಗಿ 12.52 ಲಕ್ಷ ಮೇವಿಗೆ ವೆಚ್ಚವಾಗಿದೆ.   

ಕೃಷಿ ಮತ್ತು ತೋಟಗಾರಿಕಾ ಇಲಾಖೆ
ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾಗಿ 7,109 ಹೆಕ್ಟೇರ್ ಪ್ರದೇಶದಲ್ಲಿ ಶೇ. 133 ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದೆ. ಹಾಗೂ 695  ಹೆಕ್ಟೇರ್ ಪ್ರದೇಶದಲ್ಲಿ ಹೂಳು ತುಂಬಿ ಬೆಳೆ ಹಾನಿಯಾಗಿದೆ. 68,092 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳಾದ ಕಾಫಿ, ಕರಿಮೆಣಸು, ಬಾಳೆ, ಶುಂಟಿ ಮತ್ತು ಏಲಕ್ಕಿ ಬೆಳೆಗಳಲ್ಲಿ ಶೇ.33 ಕ್ಕಿಂತ ಹೆಚ್ಚು ಹಾನಿಯಾಗಿದೆ.

ಮೊಬೈಲ್ ಆಪ್ ಬಳಕೆ ಮಾಡಿ ಜಿಲ್ಲೆಯಾದ್ಯಂತ ಬೆಲೆ ನಷ್ಟದ ಬಗ್ಗೆ ಸರ್ವೆ ಪೂರ್ಣಗೊಳಿಸಿದ್ದು ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದು ಪರಿಹಾರ ವಿತರಣಾ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ 17.85 ಕೋಟಿ ರೂ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಪಾವತಿಸಲಾಗಿದೆ. 

ಕಾವೇರಿ ನೀರಾವರಿ ನಿಗಮ
ಪ್ರಕೃತಿ ವಿಕೋಪ ಪ್ರವಾಹ ಭೂಕುಸಿತದಿಂದಾಗಿ ನದಿಗಳು, ಕೆರೆ ಹಾಗೂ ಜಲಾಶಯದಲ್ಲಿ ತುಂಬಿರುವ ಹೂಳನ್ನು ಎತ್ತುವ ಕಾರ್ಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಹಾರಂಗಿ ನದಿ ಪಾತ್ರದಲ್ಲಿ ಹೂಳು ತೆಗೆಯಲು 75 ಕೋಟಿ ರೂ ಅನುದಾನ ನೀಡಿದ್ದು, ಈಗಾಗಲೇ ಕೆಇಆರ್‍ಎಸ್ ವತಿಯಿಂದ 20 ಲಕ್ಷ ರೂಗಳನ್ನು ಸರ್ವೇ ಕಾರ್ಯಕ್ಕಾಗಿ ಟೆಂಡರ್ ಆದಾರದ ಮೇಲೆ ಜಿಯೋ ನಿರೈ ಸೊಲೂಷನ್ ಪ್ರೈವೆಟ್ ಲಿಮಿಟೆಡ್ ಕಂಪನಿಗೆ ನೀಡಲಾಗಿದ್ದು ಸರ್ವೇ ಕಾರ್ಯ ಪ್ರಗತಿಯಲ್ಲಿದೆ. 

ಸಣ್ಣ ನೀರಾವರಿ ಇಲಾಖೆ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿಗೆ 3 ತಾಲೂಕುಗಳು ಒಳಗೊಂಡಂತೆ 29 ಕೆರೆಗಳು, 21 ಅಣೆಕಟ್ಟು ಹಾಗೂ 04 ಏತ ನೀರಾವರಿ ಯೋಜನೆಗಳು ಒಳಪಡುತ್ತವೆ. ಪ್ರಕೃತಿ ವಿಕೋಪದಿಂದಾಗಿ ಅಣೆಕಟ್ಟು ವ್ಯಾಪ್ತಿಯಲ್ಲಿ ಬರುವ ನಾಲೆ ಏತ ನೀರಾವರಿ ಯೋಜನೆಗಳಿಗೆ ದುರಸ್ತಿ ಹಾಗೂ ತಡೆಗೋಡೆ ನಿರ್ಮಾಣದಂತಹ ಕಾಮಗಾರಿಗಳನ್ನು ಕೈಗೊಳ್ಳಲು 1.82 ಕೋಟಿ ರೂ ಬಿಡುಗಡೆಯಾಗಿದೆ.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಪ್ರಕೃತಿ ವಿಕೋಪದಿಂದಾಗಿ 157 ಅಂಗನವಾಡಿ ಕೇಂದ್ರಗಳು ಭಾಗಶಃ ಹಾನಿಯಾಗಿದ್ದು, 107 ಅಂಗನವಾಡಿ ಕೇಂದ್ರಗಳ ದುರಸ್ತಿಗೆ 1.81 ಕೋಟಿ ಬಿಡುಗಡೆ ಮಾಡಿದ್ದು, ಘಟಕ ಒಂದಕ್ಕೆ ಗರಿಷ್ಟ 2 ಲಕ್ಷ ವೆಚ್ಚದಲ್ಲಿ 1.60 ಕೋಟಿ ಅನುದಾನದಲ್ಲಿ 107 ಅಂಗನವಾಡಿದಗಳ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗಿದೆ.

ಉಳಿದ 50 ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಕಾಮಗಾರಿ ಕೈಗೊಳ್ಳಲಾಗುವುದು. ತೀವ್ರವಾಗಿ ಹಾನಿಯಾದ 10 ಅಂಗನವಾಡಿ ಕೇಂದ್ರಗಳಲ್ಲಿ ನರೇಗಾ ಯೋಜನೆಯಡಿ 02, ಟಾಟಾ ಸಂಸ್ಥೆಯವರು 04, ಚಾಲ್ಸ್ ಕೊರಿಯಾ ಸಂಸ್ಥೆಯವರು 03 ಹಾಗೂ ಸಿಎಂಡಿ ಸಂಸ್ತೆಯವರು 01 ಅಂಗನವಾಡಿ ಕೇಂದ್ರಗಳನ್ನು ಪುನರ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X