ರಥಬೀದಿ ಶ್ರೀಕಾಳಿಕಾಂಬಾ ಸೇವಾ ಸಮಿತಿಯ ವಾರ್ಷಿಕೋತ್ಸವ

ಮಂಗಳೂರು, ಮಾ. 2: ನಗರದ ರಥಬೀದಿಯ ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ 54ನೇ ವಾರ್ಷಿಕೋತ್ಸವವು ಇತ್ತೀಚೆಗೆ ಜರುಗಿತು. ಸಮಿತಿಯ ಅಧ್ಯಕ್ಷ ಕೆ.ವಿ. ಜಯರಾಜ್ ಅಧ್ಯಕ್ಷತೆ ವಹಿಸಿದ್ದರು.
ನೆಕ್ಲಾಜೆ ಕಾರ್ಕಳ ಶ್ರೀಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಕೆ. ರತ್ನಾಕರ ಆಚಾರ್ಯ, ಮಂಗಳೂರು ಶ್ರೀಕಾಳಿಕಾಂಬಾ ನಾಯಕ ದೇವಳದ 3ನೇ ಮೊಕ್ತೇಸರ ಎ.ಲೋಕೇಶ್ ಆಚಾರ್, ಜಯಶ್ರೀ ಪಿ. ಉಳ್ಳಾಲ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಈ ಸಂದರ್ಭ ಸಮಿತಿಯ ಹಿರಿಯ ಕಾರ್ಯಕರ್ತರಾದ ಕರೋಪಾಡಿ ಜಗದೀಶ ಆಚಾರ್ಯ ಮತ್ತು ಯು. ಗಣೇಶ್ ಅವರನ್ನು ದಂಪತಿ ಸಮೇತವಾಗಿ ಸನ್ಮಾನಿಸಲಾಯಿತು.
ಕಾರ್ಯದರ್ಶಿ ಜೆ. ವಿವೇಕ್ ವಾರ್ಷಿಕ ವರದಿ ವಾಚಿಸಿದರು. ಬಿ. ಉದಯ ಆಚಾರ್ಯ ಸ್ವಾಗತಿಸಿದರು. ಸುರೇಶ್ ಎಚ್ ಸಂದೇಶ ವಾಚಿಸಿದರು. ರವೀಂದ ಎಸ್. ಹಾಗೂ ಸುದೇಶ್ ಬಬ್ಬುಕಟ್ಟೆ ಸನ್ಮಾನ ಪತ್ರ ವಾಚಿಸಿದರು. ವಿಶ್ವಕರ್ಮ ಕ್ರೀಡಾಕೂಟ-2019ರ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಕ್ರೀಡಾ ಕಾರ್ಯದರ್ಶಿ ಸದಾಶಿವ ಪಿ. ಅಂಡಿಂಜೆ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಶ ನೆತ್ತರ ನಿರೂಪಿಸಿದರು. ಪಿ.ಕೆ. ಹರೀಶ್ ವಂದಿಸಿದರು. ಪಿ. ರವೀಂದ್ರ ಮಂಗಳಾದೇವಿ ಕಾರ್ಯಕ್ರಮ ನಿರೂಪಿಸಿದರು.







