ಮಾ.6 ರಂದು ಪ್ರವಾಸೋದ್ಯಮ ಕುರಿತ ಪುಸ್ತಕ ಅನಾವರಣ
ಉಡುಪಿ, ಮಾ. 2: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಉಡುಪಿ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿ ಇವರ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಸಮಗ್ರ ಮಾಹಿತಿ ಹಾಗೂ ಛಾಯಾ ಚಿತ್ರವನ್ನೊಳಗೊಂಡ ಕಾಪಿ ಟೇಬಲ್ ಬುಕ್ ‘ಉಡುಪಿ- ಎ ಮಿಸ್ಟಿಕಲ್ ಕೊಲಾಜ್’ ಇದರ ಅನಾವರಣ ಮಾ.6 ರಂದು ಬೆಳಗ್ಗೆ 10ಕ್ಕೆ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿದೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಕೃತಿ ಬಿಡುಗಡೆ ಗೊಳಿಸಲಿದ್ದಾರೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಪ್ರಕಟಣೆ ತಿಳಿಸಿದೆ.
Next Story





