ಹೆಮ್ಮಾಡಿ ಮಹಿಳೆಯ ಕೊಲೆ ಶಂಕೆ: ತನಿಖೆಗಾಗಿ ತಂಡಗಳ ರಚನೆ
ಕುಂದಾಪುರ, ಮಾ.2: ಕಟ್ಬೇಲ್ತೂರು ಗ್ರಾಮದ ಹೆಮ್ಮಾಡಿ ಸಮೀಪದ ಹರೆಗೋಡು ನಿವಾಸಿ ಗುಲಾಬಿ ಮೊಗವೀರ(55) ಎಂಬವರ ಸಾವು ಮೇಲ್ನೋಟಕ್ಕೆ ಕೊಲೆ ಎಂಬಂತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಅದಕ್ಕಾಗಿ ಏಳು ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.
ಒಂಟಿಯಾಗಿ ವಾಸ ಮಾಡುತ್ತಿದ್ದ ಗುಲಾಬಿ ಮಾ.1ರಂದು ಮನೆಯಲ್ಲಿ ಅನು ಮಾನಾಸ್ಪದವಾಗಿ ಮೃತಪಟ್ಟಿದ್ದರು. ಈ ವೇಳೆ ಪರಿಶೀಲಿಸಿದಾಗ ಗುಲಾಬಿ ಹೆಚ್ಚಾಗಿ ಧರಿಸುತ್ತಿದ್ದ ಕುತ್ತಿಗೆಯಲ್ಲಿ ಚಿನ್ನದ ಸರ, ಕಿವಿಯಲ್ಲಿ ಬೆಂಡೋಲೆ, ಕೈಯಲ್ಲಿ ರಿಂಗ್ ಕಂಡುಬಾರದಿರುವುದು ಸಾಷ್ಟು ಅನುಮಾನಕ್ಕೆ ಎಡೆಮಾಡಿತ್ತು.
ಈ ಬಗ್ಗೆ ಮನೆಯಲ್ಲಿ ಹುಡುಕಾಟ ನಡೆಸಿದಾಗಲೂ ಈ ಚಿನ್ನಾಭರಣಗಳು ಪತ್ತೆಯಾಗಿರಲಿಲ್ಲ. ಅಲ್ಲದೆ ಮನೆಯ ಬಾಗಿಲು ಕೂಡ ತೆರೆದಿತ್ತು. ಈ ಹಿನ್ನೆಲೆ ಯಲ್ಲಿ ದುಷ್ಕರ್ಮಿಗಳು ಗುಲಾಬಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ಕಳವು ಮಾಡಿರಬಹುದೆಂದು ಶಂಕಿಸ ಲಾಗಿದೆ.
ಈ ನಿಟ್ಟಿನಲ್ಲಿ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಮಂಜಪ್ಪ, ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ಸೇರಿದಂತೆ ಒಟ್ಟು 7 ಮಂದಿಯ ತಂಡವನ್ನು ರಚಿಸಲಾಗಿದೆ. ಈ ತಂಡಗಳು ವಿವಿದ ಆಯಾಮಗಳಲ್ಲಿ ತನಿಖೆಯನ್ನು ಮುಂದುವರೆಸಿವೆ ಎಂದು ಮೂಲಗಳು ತಿಳಿಸಿವೆ.







