ಕ್ಯುಎಸ್ ವಿಶ್ವ ರ್ಯಾಂಕಿಂಗ್: ಮಾಹೆ ಖಾಸಗಿ ವಿವಿಗಳಲ್ಲಿ ನಂ.1
ಮಣಿಪಾಲ, ಮಾ. 2: ಕ್ಯುಎಸ್ ವಿಶ್ವವಿವಿಗಳ ರ್ಯಾಂಕಿಂಗ್‌ನಲ್ಲಿ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಮೆಡಿಸಿನ್ ಮತ್ತು ಫಾರ್ಮಸಿ ವಿಷಯಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ದೇಶದ ಏಕೈಕ ಖಾಸಗಿ ವಿವಿ ಇದಾಗಿದೆ ಎಂದು ಮಾಹೆ ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಣಿಪಾಲದ ಕೆಎಂಸಿ 351-400 ಶ್ರೇಣಿಯ ವರ್ಗದಲ್ಲಿ ಸ್ಥಾನ ಪಡೆದಿದ್ದು, ಒಟ್ಟಾರೆಯಾಗಿ 58.9 ಅಂಕ ಪಡೆದಿದೆ. ಮಣಿಪಾಲ ಫಾರ್ಮಸ್ಯೂಟಿಕಲ್ ಕಾಲೇಜು (ಎಂಕಾಪ್ಸ್) 201-250 ಶ್ರೇಣಿಯಲ್ಲಿ ಸ್ಥಾನ ಸಂಪಾದಿಸಿದೆ. ಅದು 59.8 ಅಂಕ ಪಡೆದಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಷಯಾಧಾರಿತವಾಗಿ ರಚನೆಗೊಂಡಿರುವ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದೇಶದ ಉಳಿದ ಸಂಸ್ಥೆಗಳೆಂದರೆ ದಿಲ್ಲಿಯ ಏಮ್ಸ್, ಜಾಮಿಯಾ ಹಮ್‌ದರ್ದ್ ಹಾಗೂ ಬನಾರಸ್ ಹಿಂದು ವಿವಿ. ಇವೆಲ್ಲವೂ ಸರಕಾರಿ ಸಂಸ್ಥೆಗಳಾಗಿವೆ.
Next Story





