Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಅಲ್ಲೀಗ ಪರಿಸ್ಥಿತಿ ಹೇಗಿದೆ...

ಅಲ್ಲೀಗ ಪರಿಸ್ಥಿತಿ ಹೇಗಿದೆ ಕಾಸಿಯವ್ರೇ.....

ಯುದ್ಧಭೂಮಿಯಲ್ಲಿ 420 ಚಾನಲ್…!

*ಚೇಳಯ್ಯ chelayya@gmail.com*ಚೇಳಯ್ಯ chelayya@gmail.com3 March 2019 12:15 AM IST
share
ಅಲ್ಲೀಗ ಪರಿಸ್ಥಿತಿ ಹೇಗಿದೆ ಕಾಸಿಯವ್ರೇ.....

 ‘‘ಇದೀಗ ನಮ್ಮ 420 ಚಾನೆಲ್‌ನ ವರದಿಗಾರರಾಗಿರುವ ಎಂಜಲು ಕಾಸಿಯವರು ಬಾಲ್‌ಕೋಟ್ ಯುದ್ಧ ಭೂಮಿಗೆ ತೆರಳಿ ನೇರವಾಗಿ ಸುದ್ದಿಗಳನ್ನು ನೀಡಲಿದ್ದಾರೆ....ಕಾಸಿಯವರೇ....ಅಲ್ಲೀಗ ಪರಿಸ್ಥಿತಿ ಹೇಗಿದೆ?’’
‘‘ಮೇಡಂ...ಇಲ್ಲಿ ಪರಿಸ್ಥಿತಿ ಏನೂ ಗೊತ್ತಾಗುತ್ತಿಲ್ಲ ಮೇಡಂ...ಎಲ್ಲ ಹೊಗೆ ಆವರಿಸಿದೆ...’’ ಕಾಸಿಯ ಉತ್ತರ.
‘‘ವಿಮಾನ ಸ್ಫೋಟದ ಹೊಗೆಯೇ....ಅಥವಾ ಉಗ್ರರ ಮೇಲೆ ಸುರಿದ ಬಾಂಬ್‌ನ ಹೊಗೆಯೇ....’’
‘‘ಹೊಗೆಯಿಂದ ಏನೂ ಗೊತ್ತಾಗುತ್ತಿಲ್ಲ ಮೇಡಂ...ಇದೀಗ ತಾನೆ ಹೊಗೆ ಮೇಲೇರುತ್ತಾ ಇದೆ....ಹೊಗೆಯಲ್ಲಿ ಉಸಿರಾಟಕ್ಕೆ ಕಷ್ಟವಾಗುತ್ತಿದೆ....’’
‘‘ಈ ಹೊಗೆಯಿಂದ ಅಲ್ಲಿಯ ಜನರಿಗೆ ಏನನ್ನಿಸುತ್ತಿದೆ ಕಾಸಿಯವ್ರೇ....’’
‘‘ಇಲ್ಲಿ ಯಾರೂ ಜನ ಕಾಣಿಸ್ತಾ ಇಲ್ಲ ಮೇಡಂ...ಆದರೂ ಯಾರೋ ಕಸಕಡ್ಡಿ ರಾಶಿ ಹಾಕಿ ಬೆಂಕಿ ಉರಿಸುತ್ತಾ ಇದ್ದ ಹಾಗಿದೆ...’’
‘‘ಇದೀಗ ಬ್ರೇಕಿಂಗ್ ಸುದ್ದಿ ನಮ್ಮ ವರದಿಗಾರರಿಂದ....ಉಗ್ರರ ಶವಗಳನ್ನು ಕಸಕಡ್ಡಿ ಹಾಕಿ ಸೈನಿಕರು ಉರಿಸುತ್ತಿರುವ ಬಗ್ಗೆ ವರದಿಗಾರರು ಮಾತನಾಡಿದ್ದಾರೆ....ಕಾಸಿಯವ್ರೇ ನನ್ನ ಮಾತು ಕೇಳಿಸ್ತಾ ಇದೆಯಾ?’’
‘‘ಕೇಳಿಸ್ತಾ ಇದೆ ಮೇಡಂ....’’
‘‘ಅಲ್ಲಿ ಪರಿಸ್ಥಿತಿ ಹೇಗಿದೆ.....’’
‘‘ಒಂದು ಸ್ವಲ್ಪ ಚಳಿ ಇದೆ ಮೇಡಂ...ಬಹುಶಃ ಚಳಿಕಾಯಿಸಲು ಬೆಂಕಿ ಹಾಕಿದ ಹಾಗೆ ಇದೆ ಮೇಡಂ...’’
‘‘ಹಲೋ ಹಲೋ...ಕೇಳಿಸ್ತಾ ಇಲ್ಲ....ನಮ್ಮ ಯೋಧರು ವಿಪರೀತ ಚಳಿಯ ಜೊತೆಗೆ ಯುದ್ಧ ಮಾಡುತ್ತಿರುವ ವಿವರಗಳನ್ನು ಈಗಾಗಲೇ ಕಾಸಿಯವರು ನೀಡಿದ್ದಾರೆ....ಇನ್ನಷ್ಟು ವಿವರಗಳೇನಾದರೂ ಇದೆಯಾ...ಕಾಸಿಯವ್ರೇ...’’
‘‘ನಿಮ್ಮ ಮಾತು ಸರಿಯಾಗಿ ಕೇಳಿಸ್ತಾ ಇಲ್ಲ ಮೇಡಂ....’’
‘‘ಈಗ ಕೇಳಿಸ್ತಾ ಇದೆಯಾ ಕಾಸಿಯವ್ರೇ...’’
‘‘ಕೇಳಿಸ್ತಾ ಇದೆ ಮೇಡಂ....’’
‘‘ಈಗ ಅಲ್ಲಿಯ ಪರಿಸ್ಥಿತಿ ಹೇಗಿದೆ ಕಾಸಿಯವ್ರೇ....ಹೊಗೆ ಬರ್ತಾನೇ ಇದೆಯಾ...’’
‘‘ಹೌದು ಮೇಡಂ ಹೊಗೆ ನಿರಂತರವಾಗಿ ಬರ್ತಾನೇ ಇದೆ....’’
‘‘ಹೊಗೆಯ ಬಣ್ಣ ಹೇಗಿದೆ ಕಾಸಿಯವ್ರೇ...’’
‘‘ಕಪ್ಪಾಗಿದೆ...ಸ್ವಲ್ಪ ಬೂದು ಬಣ್ಣ ಇದೆ...ಕಣ್ಣು ತುಸು ಉರೀತಾ ಇದೆ....’’
‘‘ನಮ್ಮ ವರದಿಗಾರರು ಈಗಾಗಲೇ ಮಹತ್ವದ ವಿಷಯಗಳನ್ನು ತಿಳಿಸಿದ್ದಾರೆ. ಹೊಗೆಯ ಬಣ್ಣ ಕಪ್ಪಾಗಿದೆಯಂತೆ. ತುಸು ಬೂದು ಬಣ್ಣವೂ ಇದೆಯಂತೆ....ಕಾಸಿಯವ್ರೇ ಇನ್ನೇನಾದರೂ ವಿಶೇಷತೆ ಇದೆಯಾ...’’
‘‘ಆಕಾಶದಲ್ಲಿ ಒಂದು ಹಕ್ಕಿ ಹಾರಿ ಹೋಯಿತು ಮೇಡಂ....’’
‘‘ಅದು ಯುದ್ಧ ವಿಮಾನವಾಗಿರಬಹುದಲ್ಲ ಕಾಸಿಯವ್ರೇ...ನಿಮಗೇನನಿಸುತ್ತಿದೆ....’’
‘‘ನನಗೂ ಹಾಗೆ ಅನ್ನಿಸುತ್ತಿದೆ ಮೇಡಂ...ಆದರೆ ಯುದ್ಧ ವಿಮಾನ ಹೋಗಿ ಮರದಲ್ಲಿ ಕೂತಿದೆ ಮೇಡಂ...’’
‘‘ಅಂದರೆ ಪಾಕ್ ವಿಮಾನವನ್ನು ಭಾರತ ಉರುಳಿಸಿತು ಎಂದು ಹೇಳುತ್ತಿದ್ದೀರಾ ಕಾಸಿಯವ್ರೇ....’’
‘‘ಹಾಗಲ್ಲ ಮೇಡಂ....ಅದು ನಿಜಕ್ಕೂ ಹಕ್ಕಿಯೇ ಎಂದು ನನಗನ್ನಿಸುತ್ತಿದೆ ಮೇಡಂ...’’
‘‘ಅದು ಹಕ್ಕಿ ಎಂದು ನೀವು ಹೇಗೆ ಹೇಳುತ್ತೀರಿ...ನನಗದು ಯುದ್ಧ ವಿಮಾನ ಎಂದು ಭಾಸವಾಗುತ್ತಿದೆ...ಕಾಸಿಯವ್ರೇ...ಇನ್ನೊಮ್ಮೆ ಸರಿಯಾಗಿ ನೋಡಿ ಕಾಸಿಯವ್ರೇ....’’
‘‘ಯುದ್ಧ ವಿಮಾನ ಹಣ್ಣು ತಿನ್ನ್ನುತ್ತಾ ಮೇಡಂ...ಆ ಹಕ್ಕಿ ಮರದಲ್ಲಿರುವ ಹಣ್ಣುಗಳನ್ನು ತಿನ್ನುತ್ತಾ ಇದೆ ಮೇಡಂ...ಆದರೂ ನೀವು ಹೇಳಿದ ಹಾಗೆ ಸಣ್ಣ ರೀತಿಯ ಅನುಮಾನ ಇದ್ದೇ ಇದೆ ಮೇಡಂ....ಹಕ್ಕಿಯೋ ಯುದ್ಧವಿಮಾನವೋ ಎನ್ನುವುದನ್ನು ಇನ್ನಷ್ಟೇ ಸ್ಪಷ್ಟ ಪಡಿಸಿಕೊಳ್ಳಬೇಕು....’’
‘‘ಅಲ್ಲಿ ಒಟ್ಟು ಎಷ್ಟು ಹೆಣಗಳು ಬಿದ್ದಿವೆ ಕಾಸಿಯವ್ರೇ....’’
‘‘ಇಲ್ಲಿ ಯಾವುದೇ ಹೆಣಗಳು ಕಾಣಿಸುತ್ತಾ ಇಲ್ಲ ಮೇಡಂ....’’
‘‘ಭಾರೀ ಮಹತ್ವದ ಮಾಹಿತಿ ನೀಡಿದ್ದೀರಿ...ವಂದನೆಗಳು....ಬಾಲ್‌ಕೋಟ್‌ನಲ್ಲಿ ಉಗ್ರರ ಹೆಣಗಳೆಲ್ಲ ಸುಟ್ಟು ಭಸ್ಮವಾಗಿದ್ದು ಆದುದರಿಂದ ಯಾವ ಹೆಣಗಳೂ ಕಾಣುತ್ತಿಲ್ಲ ಎಂದು ವರದಿಗಾರರು ಹೇಳಿದ್ದಾರೆ...ಇನ್ನಷ್ಟು ಮಾಹಿತಿಗಾಗಿ ಕಾಯೋಣ....ನನ್ನ ಮಾತು ಕೇಳಿಸ್ತಿದೆಯಾ ಕಾಸಿಯವ್ರೇ...’’
‘‘ಕೇಳಿಸ್ತಾ ಇದೆ ಮೇಡಂ....’’
‘‘ಅಲ್ಲಿ ಪರಿಸ್ಥಿತಿ ಹೇಗಿದೆ ಕಾಸಿಯವ್ರೇ...’’
‘‘ಇಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಮೇಡಂ...’’
‘‘ಅಂದರೆ ಪಾಕ್-ಭಾರತ ಸೈನಿಕರ ನಡುವೆ ಘರ್ಷಣೆ ಮುಂದುವರಿದಿದೆಯಾ?’’
‘‘ಹಾಗೇನಿಲ್ಲ...ಇಲ್ಲಿ ಎರಡು ಟಗರುಗಳು ಪರಸ್ಪರ ಗುದ್ದಾಟ ನಡೆಸಿವೆ.. ಒಂದು ಟಗರಿನ ಕೊಂಬು ಮುರಿದಿದೆ...’’
‘‘ಅದು ಪಾಕಿಸ್ತಾನದ ಟಗರೋ ಭಾರತದ ಟಗರೋ ಎಂದು ಹೇಳಬಹುದೆ ಕಾಸಿಯವ್ರೇ...’’
‘‘ಭಯಂಕರ ಧೂಳು ಮೇಡಂ...ಗೊತ್ತಾಗ್ತಾ ಇಲ್ಲ...’’
‘‘ಅಲ್ಲಿ ಬೇರೇನು ಕಾಣ್ತಾ ಇದೆ ಕಾಸಿಯವ್ರೇ....ಆ ಟಗರು ಕಾಳಗದ ಕುರಿತಂತೆ ಸ್ಥಳೀಯರು ಏನು ಹೇಳುತ್ತಿದ್ದಾರೆ...’’
‘‘ಇಲ್ಲಿ ಬೇರೆ ಯಾರೂ ಇಲ್ಲ ಮೇಡಂ....’’
‘‘ಬೇರೆ ಯುದ್ಧ ಟ್ಯಾಂಕರ್‌ಗಳು ಹತ್ತಿರದಲ್ಲಿ ಇದೆಯಾ ಕಾಸಿಯವ್ರೇ....’’
‘‘ಹಾಗೇನೂ ಇಲ್ಲ ಮೇಡಂ...ಒಂದು ಐರಾವತ ಬಸ್ ಬರ್ತಾ ಇದೆ ಮೇಡಂ...’’
‘‘ಕರ್ನಾಟಕ ರಾಜ್ಯದ ಐರಾವತ ಬಸ್ ಅಲ್ಲೇಕೆ ಬಂದಿದೆ ಕಾಸಿಯವ್ರೇ....’’
‘‘ಅದೇ ಗೊತ್ತಾಗ್ತ ಇಲ್ಲಾ ಮೇಡಂ...’’
‘‘ನೀವೀಗ ಬಾಲಕೋಟ್‌ನ ಯಾವ ಪ್ರದೇಶದಲ್ಲಿದ್ದೀರಿ....’’
‘‘ನಾನು ಬಾಲ್‌ಕೋಟ್‌ನಲ್ಲಿ ಇಲ್ಲ ಮೇಡಂ....ರಾಜ್ಯದ ಬಾಗಲಕೋಟೆಯಿಂದ ವರದಿ ಮಾಡ್ತಾ ಇದ್ದೇನೆ....’’
‘‘ಹಲೋ ಹಲೋ...ತಾಂತ್ರಿಕ ದೋಷದಿಂದ ವರದಿಗಾರರು ಸಂಪರ್ಕಕ್ಕೆ ಸಿಗುತ್ತಿಲ್ಲ....ಇದೀಗ ಇನ್ನೊಂದು ಬ್ರೇಕಿಂಗ್ ಸುದ್ದಿ.....’’

 

share
*ಚೇಳಯ್ಯ chelayya@gmail.com
*ಚೇಳಯ್ಯ chelayya@gmail.com
Next Story
X