ಕಾಸರಗೋಡು: ಪಳ್ಳಂಜಿ ಸೇತುವೆಯಡಿ ಪುರುಷ-ಮಹಿಳೆಯ ಮೃತದೇಹ ಪತ್ತೆ
ಕಾಸರಗೋಡು, ಮಾ. 3: ಅಡೂರು ಪಳ್ಳಂಜಿ ಸೇತುವೆಯಡಿಯಲ್ಲಿ ಪುರುಷ ಮತ್ತು ಮಹಿಳೆಯ ಮೃತದೇಹ ರವಿವಾರ ಬೆಳಗ್ಗೆ ಪತ್ತೆಯಾಗಿದೆ
ಸೇತುವೆ ಅಡಿ ಭಾಗದ ಡ್ರೈನೇಜ್ ನಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ದಂಪತಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಸುಮಾರು 50 - 55ರ ಮಧ್ಯೆ ಪ್ರಾಯ ಹೊಂದಿದ್ದು, ಪರಿಸರವಾಸಿಯೋರ್ವರು ಗಮನಿಸಿ ಆದೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Next Story